‘ಮೋದಿ ಜನತೆಯ ಪ್ರಧಾನ ಸೇವಕರಲ್ಲ, ಅಂಬಾನಿ ಅದಾನಿ ಸೇವಕ’

ಕಲಬುರ್ಗಿ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ, ಚೋರ್​ ಗುರು ಚಂಡಾಲ್​ ಶಿಷ್ಯ ಎಂದು ಸಚಿವ ಪ್ರಿಯಾಂಕ್​ ಖರ್ಗೆ ವ್ಯಂಗ್ಯವಾಡಿದ್ದಾರೆ.
ಅಫಜಲಪುರದಲ್ಲಿ ಭಾಷಣ ಮಾಡಿದ ಪ್ರಿಯಾಂಕ್​ ಖರ್ಗೆ, ವಿಧಾನಸಭೆ ಚುನಾವಣೆಯಲ್ಲಿ‌‌ ಬಿಜೆಪಿ 104, ಸಮ್ಮಿಶ್ರ ಸರ್ಕಾರದವರದ್ದು 118 ಸ್ಥಾನ ಇತ್ತು. ಈ ವೇಳೆ ರಾಜ್ಯಪಾಲರನ್ನು ಬಳಸಿಕೊಂಡು ಬಿಜೆಪಿ ಅವರು ಏನೇನೂ ಮಾಡಿದರು ತಮಗೆಲ್ಲ ಗೊತ್ತು. ಪ್ರಧಾನಿ ಮೋದಿ, ಅಮಿತ್ ಶಾ ಹೇಳಿದ ಹಾಗೇ‌ ರಾಜ್ಯಪಾಲರು ಕೇಳಿದರು. ಕೊನೆಗೆ ನಾವು ಸುಪ್ರೀಂಕೋರ್ಟ್ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿತ್ತು. ಇದರಿಂದಾಗಿ ಯಡಿಯೂರಪ್ಪ ದೋ ದಿನ್​ಕಾ ಸುಲ್ತಾನ್​ ಆಗುವ ಪರಿಸ್ಥಿತಿ ಬಂತು ಎಂದು ಪರೋಕ್ಷವಾಗಿ ಕಿಡಿಕಾರಿದರು.
ದೇಶದ ಪ್ರಧಾ‌ನಿ ಮೋದಿ ಅವರು ರಾಷ್ಟ್ರದ ಸೇವಕ ಅಂತಾ ಹೇಳುತ್ತಾರೆ. ಆದರೆ  18 ರಿಂದ 28 ಲಕ್ಷ ರೂಪಾಯಿ ಬೆಲೆಯ ಸೂಟ್‌ಬೂಟ್ ಹಾಕುತ್ತಾರೆ. ಆದರೆ ಪ್ರಧಾನಿ ಮೋದಿ ಅವರು ದೇಶದ ಜನತೆಯ ಪ್ರಧಾನ ಸೇವಕರಂತೂ ಅಲ್ಲ. ಬದಲಾಗಿ ಅಂಬಾನಿ, ಅದಾನಿ‌ಯಂತ ಪ್ರಧಾನ ಸೇವಕರಂತೂ‌ ಹಂಡ್ರೆಡ್ ಪರ್ಸೆಂಟ್ ಸತ್ಯ ಎಂದು ಪ್ರಿಯಾಂಕ್​ ಖರ್ಗೆ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv