ಬಿಜೆಪಿಯವ್ರಿಗೆ, ರಾಜ್ಯದ ಜನ ಸರಿಯಾಗಿ ಪಾಠ ಕಲಿಸ್ತಾರೆ: ಸಚಿವ ಪರಮೇಶ್ವರ್ ನಾಯ್ಕ

ದಾವಣಗೆರೆ: ಬಿಜೆಪಿಯವರು ಬುದ್ಧಿ ಕಲಿಯಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಾರೆ. ಸರ್ಕಾರಕ್ಕೆ ಸಲಹೆ ಕೊಡುವಂತಿರಬೇಕು ಎಂದು ಮುಜರಾಯಿ ಇಲಾಖೆ ಸಚಿವ ಪರಮೇಶ್ವರ ನಾಯ್ಕ ಹೇಳಿದ್ದಾರೆ. ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮಿಕಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಇದೆ, ಅಭಿವೃದ್ಧಿಗೆ ಸಹಕಾರ‌ ಕೊಡಬೇಕು. ಸರ್ಕಾರದ ಕಾಲೆಳೆಯುವುದು ಅವರಿಗೆ ಶೋಭೆ ತರುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯವರಿಗೆ, ರಾಜ್ಯದ ಜನ ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ಪರಮೇಶ್ವರ್ ನಾಯ್ಕ ಕಿಡಿಕಾರಿದರು.

ಯಾವ ಶಾಸಕರೂ ಮುಂಬೈಯಲ್ಲಿಲ್ಲ. ಎಲ್ಲರೂ ಕರ್ನಾಟಕದಲ್ಲೇ ಇದ್ದಾರೆ. ಅವರವರ ಕ್ಷೇತ್ರದಲ್ಲಿದ್ದಾರೆ. ಸುಮ್ನೆ ಬಿಜೆಪಿಯವರು ಪಡ್ಡೆ ಹಾವನ್ನ ಇಟ್ಕೊಂಡು ಆಟ ಆಡ್ತಿದಾರೆ. ಸರಕಾರಕ್ಕೆ ಏನೂ ಆಗಲ್ಲ ಎಂದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv