ಸಚಿವರಾದ ಬಳಿಕ ಮೊದಲಬಾರಿ ಕ್ಷೇತ್ರಕ್ಕಾಗಮಿಸಿದ ನಾಡಗೌಡ

ರಾಯಚೂರು: ಸಚಿವರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ವೆಂಕಟರಾವ್ ನಾಡಗೌಡ ಸಿಂಧನೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇನ್ನು ಮೊದಲ ಬಾರಿಗೆ ಆಗಮಿಸಿದ ನಾಡಗೌಡರಿಗೆ ಅದ್ಧೂರಿ ಸ್ವಾಗತ ನೀಡಿದ ಬೆಂಬಲಿಗರು ನಗರದ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು.

ಕಲಾತಂಡಗಳ ನೃತ್ಯದೊಂದಿಗೆ ಪಶುಸಂಗೋಪನೆ ಹಾಗೂ ಮೀನುಗಾರಿಗೆ ಖಾತೆ ಸಚಿವ ನಾಡಗೌಡರಿಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಅಲ್ಲದೆ ಸಿಂಧನೂರು ನಗರದ ಸತ್ಯಾ ಗಾರ್ಡನ್​ನಲ್ಲಿ ಸಚಿವ ನಾಡಗೌಡ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv