ಬಾಯಲ್ಲಿ ನಿಂಬೆಹಣ್ಣು ಇಟ್ಕೊಂಡು ಸಚಿವ ಎಂಟಿಬಿ ನಾಗರಾಜ್ ಸಖತ್​ ಸ್ಟೆಪ್ಸ್​ ..!

ಬೆಂಗಳೂರು: ತಮಟೆ ತಾಳಕ್ಕೆ ವಸತಿ ಸಚಿವ ಸಖತ್ ಸ್ಟೆಪ್ಸ್​ ಹಾಕಿದ್ದಾರೆ. ನಗರದ ಗರುಡಾಚಾರ್ ಪಾಳ್ಯದಲ್ಲಿ ನಡೆದ ಶ್ರೀ ರಾಮನವಮಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಚಿವ ಎಂಟಿಬಿ ನಾಗರಾಜ್​, ಸಖತ್​ ಹೆಜ್ಜೆ ಹಾಕಿದರು. ಇಂದು ಉತ್ಸವಕ್ಕೆ ಆಗಮಿಸಿದ್ದ ಸಚಿವರು, ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ತಮಟೆಯವರಿಗೆ 3 ಏಟಿನ ತಾಳ ಹಾಕುವಂತೆ ಹೇಳಿ ಹೆಜ್ಜೆ ಹಾಕಿದ್ದಾರೆ. ಆಗ ಅಲ್ಲಿದ್ದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು, ತಮಟೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಈ ಹಿಂದೆ ಚುನಾವಣಾ ಪ್ರಚಾರ ಒಂದರಲ್ಲಿ ಸಚಿವರು ನಾಗಿಣಿ ಸ್ಟೆಪ್ಸ್ ಹಾಕಿದ್ರು.

ಇದನ್ನೂ ಓದಿ: ಪ್ರಚಾರದ ವೇಳೆ ಸಚಿವ ಎಂ.ಟಿ.ಬಿ ನಾಗರಾಜ್​ ನಾಗಿನ್​​ ಸ್ಟೆಪ್​


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv