ಶಾಮನೂರು ಶಿವಶಂಕರಪ್ಪ ಮತ್ತೆ ಸಣ್ಣತನ, ಚಿಲ್ಲರೆ ಬುದ್ಧಿ ತೋರಿಸಿದ್ದಾರೆ -ಎಂ.ಬಿ ಪಾಟೀಲ್

ಬಾಗಲಕೋಟೆ: ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ತಮ್ಮನ್ನು ಮಂಗ ಎಂದು ಕರೆದಿರುವ ವಿಚಾರವಾಗಿ ಮಾತನಾಡಿದ ಎಂ.ಬಿ ಪಾಟೀಲ್, ನನಗೂ ಮಂಗ, ಹುಚ್ಚಮಂಗ, ಗೊರಿಲ್ಲಾ ಎಂದು ಕರೆಯಲು ಬರುತ್ತದೆ. ಆದ್ರೆ ನಾನು ಹಾಗೆ ಅನ್ನೋದಿಲ್ಲ ಎಂದು ಜಾಣ ಉತ್ತರ ನೀಡಿದರು. ಅದು ಅವರ ಸಂಸ್ಕೃತಿ, ಚಿಲ್ಲರೆ ರಾಜಕಾರಣ. ಈ ರೀತಿ ಮಾತನಾಡುವ ಮೂಲಕ ಅವರು ತಮ್ಮ ಸಂಸ್ಕೃತಿ ತೋರಿಸಿದ್ದಾರೆ. ಅವರು ಹಿರಿಯರು. ನಮ್ಮ ತಂದೆ ಸಮಾನರು ಎಂದು ಯಾವಾಗಲೂ ಹೇಳಿದ್ದೇನೆ. ಈಗ ಮತ್ತೆ ಸಣ್ಣತನ, ಚಿಲ್ಲರೆ ಬುದ್ಧಿ ತೋರಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ದಾರಿ ತಪ್ಪಿದ್ದಾರೆ, ನಾನು ದಾರಿ ತಪ್ಪಿಲ್ಲ. ಪ್ರಭಾಕರ ಕೋರೆ, ಶಾಮನೂರು ಶಿವಶಂಕರಪ್ಪ ಅವರುಗಳಿಂದ ನಾನು ಬೆಳೆದಿಲ್ಲ. ನಾನು ನಮ್ಮ ತಂದೆಯಿಂದ ಬೆಳೆದಿದ್ದೇನೆ ಎಂದು ಹೇಳಿದ್ದಾರೆ.