ರಾಜಕೀಯ ಬಲಕ್ಕಾಗಿ ಧರ್ಮ ಒಡೆಯಲು ಮುಂದಾದ್ರಾ ಎಂ.ಬಿ ಪಾಟೀಲ್? ವೈರಲ್ ಲೆಟರ್​​ನಲ್ಲಿ ಏನಿದೆ?

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವೇಳೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಶಿಫಾರಸ್ಸನ್ನೇನೋ ಸಲ್ಲಿಸಲಾಗಿತ್ತು. ಆದ್ರೆ, ಚುನಾವಣೆಯಲ್ಲಿ ಇದೇ ಸಿದ್ದರಾಮಯ್ಯ ಸರ್ಕಾರ ಮತ್ತೆ ಜನಮನಗೆಲ್ಲುವಲ್ಲಿ ವಿಫಲವಾಗಲು ಕಾರಣವಾಯಿತು ಅಂತಾನೂ ಹೇಳಲಾಗುತ್ತೆ. ಆದ್ರೆ, ಮತ್ತೆ ಈಗ ಪ್ರತ್ಯೇಕ ಧರ್ಮ ವಿವಾದ ಈಗ ಮತ್ತೆ ಚರ್ಚೆಗೆ ಬಂದಿದೆ. 2018 ರ ವಿಧಾನಸಭಾ ಚುನವಾಣೆಗೂ ಮುನ್ನ ವೀರಶೈವ-ಲಿಂಗಾಯತ ಧರ್ಮವನ್ನು ಒಡೆದು ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವುದರಿಂದ ಯಾವ ರೀತಿ ಲಾಭ ಆಗಲಿದೆ ಎಂದು ಗೃಹ ಸಚಿವ ಎಂ ಬಿ. ಪಾಟೀಲ್ ಆಗಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿಯವರಿಗೆ ಬರೆದಿದ್ದರು ಎನ್ನಲಾದ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಹಾಗೂ ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಷನ್ ಅನುಮತಿಯಂತೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂಬುದು ಪತ್ರದ ಸಾಂರಂಶವಾಗಿದ್ದು, ಬಿಎಲ್​​ಡಿಇ ಅಸೋಸಿಯೇಷನ್ ಲೆಟರ್ ಹೆಡ್​​​ನಲ್ಲಿ ಪತ್ರದ ಸಂಖ್ಯೆ (1414/ಸಿಎಚ್ /2017) ದಿನಾಂಕ 10-7-2017 ರಂದು ಬರೆಯಲಾಗಿದೆ. ಆದರೆ ಸಚಿವ ಎಂ.ಬಿ. ಪಾಟೀಲ್ ‘ಆ ಸಂದರ್ಭದಲ್ಲಿ ಇಂಥ ಯಾವ ಪತ್ರವನ್ನೂ ಬರೆದಿಲ್ಲ. ಪತ್ರ ನಕಲಿ ಹಾಗೂ ಈ ಕುರಿತು ತನಿಖೆ ನಡೆಸಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ. ಇದೀಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ನನ್ನ ಅಸ್ಮಿಯತೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದು, ಆ ಪತ್ರವನ್ನ ಬಿಜೆಪಿ ರಾಜ್ಯ ಐಟಿ ಸೇಲ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಇಂಗ್ಲಿಷಿನಲ್ಲಿ ಬರೆದ ಪತ್ರದ ಕನ್ನಡ ಅನುವಾದ ಇಲ್ಲಿದೆ ..

ಶ್ರೀಮತಿ ಸೋನಿಯಾ ಗಾಂಧಿ,

ಎಐಸಿಸಿ ಅಧ್ಯಕ್ಷರು, ನಂ, 10, ಜನಪಥ, ನವದೆಹಲಿ

ದಿನಾಂಕ: ಜುಲೈ10, 2017

ಗೌರವಾನ್ವಿತ ಮೇಡಂ,

ನೀವು ಸಲಹೆ ನೀಡಿದಂತೆ ನಾನು ಹಾಗೂ ಸಚಿವ ಸಂಪುಟದ ಕೆಲವು ಸದಸ್ಯರು ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಹಾಗೂ ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಷನ್ ನ ಪ್ರತನಿಧಿಗಳೊಂದಿಗೆ 2018ರ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದೇವೆ.

2019ರ ಲೋಕಸಭಾ ಚುನಾವಣೆ ಗೆಲ್ಲಲು ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕರ್ನಾಟಕದಲ್ಲಿನ ಆರ್​​ಎಸ್​​ಎಸ್ ಬೆಳವಣಿಗೆಗೆ ನಿಯಂತ್ರಣ ಹೇರುವುದು ಅನಿವಾರ್ಯವಾಗಿದೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ರನ್ನು ನಂಬಿಕೆ ಆಧಾರದಲ್ಲಿ ಮೇಲೆ ಓಗ್ಗೂಡಿಸಿ, ಹಾಗೆಯೇ ಹಿಂದುಗಳನ್ನು ಜಾತಿ, ಉಪಜಾತಿ ಆಧಾರದಲ್ಲೆ ಒಡೆದರೆ ಮಾತ್ರ ಇದನ್ನು ಸಾಧಿಸಬಹುದಾಗಿದೆ.

ಈ ಉದ್ದೇಶವನ್ನು ಈಡೇರಿಸಲು ವೀರಶೈವ-ಲಿಂಗಾಯತರ ನಡುವಿನ ವ್ಯತ್ಯಾಸವನ್ನು ಉಪಯೋಗಿಸಿಕೊಳ್ಳುವುದು ಹಾಗೂ ಮುಂದಿನ ಪ್ರಣಾಳಿಕೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ವಿಶೇಷ ಸವಲತ್ತು ನೀಡಬೇಕು  ಎಂದು ನಿರ್ಧರಿಸಲಾಯಿತು.

ಇದಕ್ಕಾಗಿ ಲಿಂಗಾಯತ ಸಮುದಾಯದ ನಾಲ್ವರು ಸ್ವಾಮೀಜಿ ಹಾಗೂ ಓರ್ವ ಮಹಿಳಾ ಸ್ವಾಮೀಜಿಯನ್ನು ಬಳಸಿಕೊಳ್ಳಲಾಗುವುದು. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಹಾಗೂ ಅಲ್ಪಸಂಖ್ಯಾತ ಮಾನ್ಯತೆ ನೀಡುವುದಾಗಿ ಹೇಳಿಕೊಂಡು ರಾಜ್ಯಾಧ್ಯಂತ ಮೆಗಾ ಸಮಾವೇಶ ನಡೆಸಲಾಗುವುದು.

ಈ ಬೆಳವಣಿಗೆಯು ಆರ್ ಎಸ್ ಎಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ಲಿಂಗಾಯತರು ತಾವು ಹಿಂದುಗಳಲ್ಲ ಎನ್ನುತ್ತಾರೆ. ಆರ್ ಎಸ್ ಎಸ್ ಹಿಂದು ರಾಷ್ಟ್ರದಲ್ಲಿ ನಂಬಿಕೆ ಇರಿಸಿದೆ. ಒಂದೊಮ್ಮೆ ಬಿಜೆಪಿ ಆರ್​ ಎಸ್​ ಎಸ್​​ ನಡೆ ಬೆಂಬಲಿಸಿದರೆ ಲಿಂಗಾಯತರ ಮತ ಕಳೆದುಕೊಳ್ಳುತ್ತದೆ. ಲಿಂಗಾಯತರ ಬೆಂಬಲವಿಲ್ಲದೇ ಬಿಜೆಪಿ ಗೆಲ್ಲಲ್ಲು ಸಾಧ್ಯವಿಲ್ಲ. ಇದರಿಂದ ಲಿಂಗಾಯತರ ಶೇ. 10 ರಷ್ಟು ಮತವನ್ನು ಕಾಂಗ್ರೆಸ್ ಪಡೆಯಲು ಸಫಲವಾದರೆ ಕರ್ನಾಟಕದಲ್ಲಿ ಮುಸ್ಲಿಂ, ಒಬಿಸಿ, ಎಸ್​​ಸಿ ಹಾಗೂ ಎಸ್​​ಟಿ ಬೆಂಬಲದೊಂದಿಗೆ ಮತ್ತೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭವಾಗುತ್ತದೆ. ಹೀಗಾಗಿ ಈ ವರ್ಷ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲು ನಿರ್ದರಿಸಲಾಗಿದೆ.

ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಹಾಗೂ ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಷನ್ ನ ಪ್ರತಿನಿಧಿಗಳು ಈ ಸಮಾವೇಶಕ್ಕೆ ಅಗತ್ಯವಿರುವ ಸಾರಿಗೆ, ವಸತಿ ಸೌಕರ್ಯನೀಡಲು ಒಪ್ಪಿವೆ. ಹಾಗೆಯೇ ಕಾಂಗ್ರೆಸ್ ಕಾರ್ಯಕರ್ತರೇ ಲಿಂಗಾಯತರಂತೆ ಸಮಾವೇಶದಲ್ಲಿ ಬಾಗಿಯಾಗಕಿದ್ದಾರೆ. ಹಿಂದುಗಳನ್ನು ಒಡೆದು, ಮುಸ್ಲಿಂರನ್ನು ಒಗ್ಗೂಡಿಸುವ ಈ ಕಾರ್ಯತಂತ್ರದಿಂದ 2018ರ ವಿಧಾನಸಭೆ ಚುನಾವಣೆಯನ್ನು ನಾವು ಖಂಡಿತ ಗೆಲ್ಲಲಿದ್ದೇವೆ.

ನಿಮ್ಮ ನಂಬಿಕೆಯ
ಎಂ.ಬಿ. ಪಾಟೀಲ್


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv