‘ಸಿಟಿ ರವಿಯವರದ್ದು ನಾಲಿಗೆಯಾ, ಚಪ್ಪಲಿಯೇ’ ಜಯಮಾಲ ಪ್ರಶ್ನೆ

ಮಂಗಳೂರು: ಈ ಬಾರಿ ಚುನಾವಣೆ ಸತ್ಯ ಸುಳ್ಳಗಳ ನಿರ್ಣಾಯಕ ಚುನಾವಣೆ. ಕೆಲಸ ಮಾಡದೇ ಇರುವುದಕ್ಕೆ ಓಟ್ ಮಾಡಬೇಕೆ? ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದೀರಿ,, ಇದರಿಂದ ನೀವು ಸುಳ್ಳು ಹೇಳಿದ್ದು ಗೊತ್ತಾಗುತ್ತೆ. ಡೀಸೆಲ್‌ ಪೆಟ್ರೋಲ್ ಎಲ್ಲದರ ಬೆಲೆ‌ ಏರಿಕೆಯಾಗಿದೆ. ಜಾಹೀರಾತಿಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ ಎಂದು ಸಚಿವೆ ಜಯಮಾಲ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಜಯಮಾಲ, ಚುನಾವಣೆ ಸಂಧರ್ಭದಲ್ಲಿ ಐಟಿ ರೈಡ್ ಮಾಡಿಸುತ್ತಾರೆ.  ಹೆಲಿಕಾಪ್ಟರ್​​ನಲ್ಲಿ ಬಂದು ಸೂಟ್ ಕೇಸ್ ಕೊಟ್ಟು ಹೋಗುತ್ತಾರೆ. ಅದರಲ್ಲಿ ಇರುವುದು ಏನು? ಎಲ್ಲಿಗೆ ಹೋಯಿತು? ಸಿಟಿ ರವಿ ಮೋದಿಯವರಿಗೆ ಮತ ಹಾಕುದಿಲ್ಲವಾ? ಅವರು ತಾಯಿಯ ಗಂಡ ಅಂತಾರೆ? ಇದು ಎಂತ ಹೇಳಿಕೆ, ಈ ಮಾತು ಅವರ ತಾಯಿಗೂ ಹೇಳಿದ್ರೂ ಖಂಡಿಸುತ್ತೇವೆ. ಸಿಟಿ ರವಿಯವರ ಬಾಯಿ ಇಷ್ಟು ಹೊಲಸು ಇದೆ ಅಂತಾ ಅಂದುಕೊಂಡಿರಲಿಲ್ಲ. ರವಿಗೆ ಅವರ ತಾಯಿ ಮಗು ಇದ್ದಾಗ ಬಜೆ ಉಜ್ಜಲಿಲ್ಲ. ಚುನಾವಣೆಗಾಗಿ ಏನೂ ಬೇಕಾದರೂ ಮಾಡುತ್ತಾರೆ. ಇವರದ್ದು ನಾಲಿಗೆಯಾ ಅಥವಾ ಚಪ್ಪಲಿಯೇ, ಹೆಣ್ಣನ್ನು ಲಘುವಾಗಿ ಕಾಣುತ್ತಾರೆ. ಅವರಿಗೆ ದೂರು ನೀಡಲು ಚಿಂತನೆ ಮಾಡುತ್ತಿದ್ದೇವೆ. ಅವರಿಗೆ ಎರಡು ಪುಸ್ತಕಗಳನ್ನು ಕಳುಹಿಸಿ‌ ಕೊಡುತ್ತೇವೆ. ಅಮ್ಮನ ಬಗ್ಗೆ ತಿಳಿದುಕೊಳ್ಳಲಿ ಅಂತಾ. ಶೋಭಾ ಕರಂದ್ಲಾಜೆ ಉಡುಪಿ ಐದು ವರ್ಷಗಳ‌ಕಾಲ ಬರಲೇ ಇಲ್ಲ, ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಸಂಸತ್ತಿನಲ್ಲಿ ಯಾವ ಪ್ರಶ್ನೆಯನ್ನು ಎತ್ತುದಿಲ್ಲ. ಚುನಾವಣೆಗೆ ನಿಂತು ಮೋದಿಗೆ ಓಟ್ ಮಾಡಿ‌ ಅಂತೀರಾ. ಪ್ರಜಾಪ್ರಭುತ್ವ ಕೊಲ್ಲುವ ಪರಿಸ್ಥಿತಿ ನಿರ್ಮಾಣ ಮಾಡುತ್ತೀರಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಮೇಲೆ ಹರಿಹಾಯ್ದಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv