ರೈತರ ಹಿತೈಷಿ, ಬಡವರ ಬಂಧು ಅಂತ ಹೆಚ್​​ಡಿಕೆ ಹಾಡಿ ಹೊಗಳಿದ ಸಚಿವೆ ಜಯಮಾಲ..!

ಮೈಸೂರು: ಕಳೆದ ವಿಧಾನ ಸಭೆ ಚುನಾವಣೆ ಪ್ರಚಾರದ ವೇಳೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು, ಅವರು ಹುಲಿ ಕಂಣ್ರಿ ಹುಲಿ ಎಂದು ಹಾಡಿ ಹೊಗಳಿದ್ದ ಜಯಮಾಲ, ಈಗ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಅವರ ಮೇಲೂ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ..!

ಇಂದು ನಗರದ ಕಲಾಮಂದಿರದಲ್ಲಿ ನಡೆದ ದಸರಾ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿಯವರನ್ನು ರೈತರ ಹಿತೈಷಿ, ನಾಡಿನ ಹೆಮ್ಮೆಯ ಜನಪ್ರಿಯ ಮುಖ್ಯಮಂತ್ರಿ ಎಂದು ಕೊಂಡಾಡಿದರು. ಅಷ್ಟೇ ಅಲ್ಲ ನಮ್ಮ ಮುಖ್ಯಮಂತ್ರಿ ಸರಳ ಸಜ್ಜನಿಕೆಯ ವ್ಯಕ್ತಿ, ಬಡವರ ಬಂಧು, ನೊಂದವರ ಕಷ್ಟಕ್ಕೆ ಸ್ಪಂದಿಸಿ, ಕಣ್ಣೀರೊರೆಸುವ ನಾಡಿನ ಹೆಮ್ಮೆಯ ಪುತ್ರ ಅಂತಾ ಸಚಿವೆ ಜಯಮಾಲ ಕುಮಾರಸ್ವಾಮಿಯವರನ್ನು ಹಾಡಿ ಹೊಗಳಿದ್ದಾರೆ.

ಇದೇ ವೇಳೆ, ಚಿತ್ರರಂಗವನ್ನು ಬೆಳಗಿದವರು ಕೇವಲ ನಾಯಕರಲ್ಲ. ನಟಿಯರು, ತಂತ್ರಜ್ಞರು ಕೂಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ. ಚಿತ್ರರಂಗ ಹಿರಿಯ ನಟಿಯರು, ತಂತ್ರಜ್ಞರನ್ನ ಮರೆಯೋಕೆ ಸಾಧ್ಯವೇ ಇಲ್ಲ. ಅವರ ಬಗ್ಗೆಯೂ ನಾಡಿನ ಜನತೆಗೆ ತಿಳಿಸಬೇಕು ಅಂತಾ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv