‘ಮಹಿಳೆಯರಿಗೆ ಪುರುಷರ ಬಳಿ ಕೈಯ್ಯೊಡುವ ಸ್ಥಿತಿ ಹೋಗಬೇಕು’

ಮೈಸೂರು: ಮಹಿಳೆಯರು ಸದ್ಯ ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ. ಮತ್ತಷ್ಟು ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು. ಮಹಿಳೆಯರು ಪುರುಷರ ಬಳಿ‌ ಕೈಯ್ಯೊಡ್ಡಿ ಕೇಳಿಕೊಳ್ಳುವ ಪರಿಸ್ಥಿತಿ ಹೋಗಬೇಕು ಅಂತಾ ಸಚಿವೆ ಜಯಮಾಲ ಹೇಳಿದ್ದಾರೆ.

ದಸರಾ ಮಹೋತ್ಸವದ ಅಂಗವಾದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಮಹಿಳೆಯರು ಪುರುಷರ ಬಳಿ‌ ಕೈಯ್ಯೊಡ್ಡಿ ಕೇಳಿಕೊಳ್ಳುವ ಪರಿಸ್ಥಿತಿ ಹೋಗಬೇಕು. ಉದ್ಯೋಗಿನಿ ಯೋಜನೆಯಲ್ಲಿ ಮಹಿಳೆಯರ ಸಶಕ್ತೀಕರಣಕ್ಕಾಗಿ ₹3 ಲಕ್ಷ ನೀಡಲಾಗ್ತಿದೆ. ಮಹಿಳೆಯರು ಸರ್ಕಾರದ ಯೋಜನೆಗಳನ್ನ ಬಳಸಿಕೊಳ್ಳಬೇಕು ಅಂತಾ ತಿಳಿಸಿದರು.

ಇದೇ ವೇಳೆ, ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆಯ ಪ್ರತೀಕ. ನಮ್ಮ ಭಾಷೆ, ನಮ್ಮ ನಾಡು, ನಮ್ಮ ಮೈಸೂರು.. ನಮಗೆ ಹೆಮ್ಮೆ. ಎಲ್ಲರೂ ದೇಶ ವಿದೇಶಗಳಿಗೆ ಹೋಗೋ ಬದಲು ಮೈಸೂರಿಗೆ ಬನ್ನಿ. ನಮ್ಮ ಸಂಸ್ಕೃತಿಯನ್ನ ಸವಿಯಿರಿ. ಬೇರೆ ದೇಶಗಳಿಗೆ ಹೋಗಿ ಸಂಬಂಧಗಳನ್ನ ಕಡಿದು ಕೊಳ್ಳಬೇಡಿ. ನಮ್ಮ ನಾಡಿನಲ್ಲೇ ಇದ್ದು ಸಂಬಂಧಗಳನ್ನ ವೃದ್ಧಿ ಮಾಡಿಕೊಳ್ಳಿ. ತಂದೆ ತಾಯಿ ಮಕ್ಕಳು ಎಲ್ಲರೂ ಒಂದು ಕಡೆ ಒಟ್ಟಾಗಿ ಬಾಳಬೇಕು ಅಂತಾ ಜಯಮಾಲ ಹೇಳಿದರು. ಉಳಿದ  ಕೈ ಸಚಿವರ ಗೈರು ಹಾಜರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೇರೆಯವರು ಬೇರೆ ಬೇರೆ ಕೆಲಸಗಳಲ್ಲಿ ಇದ್ದಾರೆ. ಯಾವುದೇ ಗೊಂದಲಗಳು ನಮ್ಮಲ್ಲಿ ಇಲ್ಲ ಅಂತಾ ಹೇಳಿದರು.

ಇನ್ನೂ, ನಗರದ ಜೆ ಕೆ ಮೈದಾನದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ತೆರೆಯಲಾಗಿದೆ. ಈ ಪ್ರದರ್ಶನದಲ್ಲಿ ರಾಜ್ಯದ ವಿವಿಧ ಭಾಗಗಳ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ತಯಾರು ಮಾಡಿರುವ ವಸ್ತುಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ. ಸುಮಾರು 48ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಬಗೆಯ ಗೃಹೋಪಯೋಗಿ ವಸ್ತುಗಳು ಲಭ್ಯವಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv