ವಾಸ್ತು ಪ್ರಕಾರವಲ್ಲ, ವೇಟ್​ ಪ್ರಕಾರ ಲಿಫ್ಟ್​​​​ನಲ್ಲಿ ಸಿಲುಕಿದ್ರು ರೇವಣ್ಣ..!

ಹಾಸನ: ರಾಜ್ಯ ಸಚಿವ ಸಂಪುಟದ ಪವರ್​ ಫುಲ್​ ಸಚಿವ ಹೆಚ್​​.ಡಿ ರೇವಣ್ಣ ಇಂದು ಲಿಫ್ಟ್​​ನಲ್ಲಿ ಸಿಲುಕಿ ಕೆಲ ಸಮಯ ಪರದಾಡಿದ ಘಟನೆ ನಡೆದಿದೆ. ಸದಾಕಾಲ ವಾಸ್ತು ಪ್ರಕಾರವೇ ನಡೆದುಕೊಳ್ಳುವ ಸಚಿವರು, ವೇಟ್​ ಲಿಮಿಟ್​​​ ಪ್ರಕಾರ ಲಿಫ್ಟ್​​ ಏರದ ಕಾರಣ ಈ ಫಜೀತಿ ನಡೆದಿದೆ ಎನ್ನಲಾಗಿದೆ. ಅಷ್ಟಕ್ಕೂ ಆಗಿದ್ದು ಏನೆಂದ್ರೆ, ನಗರದ ಜಿಲ್ಲಾ ಪಂಚಾಯತ್​ ಕಚೇರಿಯ ಲಿಫ್ಟ್​ನಲ್ಲಿ ರೇವಣ್ಣ ಹಾಗೂ ಇತರೆ ಏಳು ಜನ ಲಿಫ್ಟ್​​ ಏರಿದ್ರು. ಆದ್ರೆ, ಆ ಲಿಫ್ಟ್​ ಕೆಪ್ಯಾಸಿಟಿ ಕೇವಲ ಆರು ಜನರಿಗೆ ಸೀಮಿತವಾಗಿತ್ತು. ಇದನ್ನು ಗಮನಿಸಿದ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಪೇಚಾಡಿದ್ದಾರೆ.

ಸಚಿವ ರೇವಣ್ಣ, ಎಮ್​​ಎಲ್​ಎ ಗಳಾದ ಅರಸೀಕೆರೆಯ ಶಿವಲಿಂಗೇಗೌಡ, ಶ್ರವಣಬೆಳಗೊಳದ ಸಿಎನ್​ ಬಾಲಕೃಷ್ಣ, ಹಾಸನ ಜಿಲ್ಲೆಯ ಅಧಿಕಾರಿಗಳು ಸೇರಿದಂತೆ ಒಟ್ಟು ಎಂಟು ಜನರು ಲಿಫ್ಟ್​ ಏರಿದ್ರು. ತೂಕ ಹೆಚ್ಚಾದ ಹಿನ್ನೆಲೆ ಲಿಫ್ಟ್​ ಸ್ಥಗಿತಗೊಂಡು ಜಾಮ್​ ಆಗಿತ್ತು. ಆಗ ತಕ್ಷಣವೇ ಸ್ಪಂದಿಸಿದ ಸಿಬ್ಬಂದಿ, ಕೀ ಬಳಸಿ ಲಿಫ್ಟ್​ ಓಪನ್ ಮಾಡಿದ್ರು..

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv