ಅತಿವೃಷ್ಠಿ: ಸಚಿವ ರೇವಣ್ಣರಿಂದ ಎಂಎಲ್​ಎ, ಎಂಎಲ್​ಸಿಗಳ ಸಭೆ

ಹಾಸನ: ಜಿಲ್ಲೆಯ ವಿವಿಧೆಡೆ ಅತಿವೃಷ್ಠಿ ಉಂಟಾದ ಹಿನ್ನೆಲೆಯಲ್ಲಿ ಇದೇ ತಿಂಗಳ 14 ಮತ್ತು 15 ರಂದು ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ಕರೆಯುತ್ತೇನೆ ಅಂತ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ರು. ನಗರದಲ್ಲಿ ಮಾತನಾಡಿದ ಅವರು, ಎರಡು‌ ದಿನಗಳ ಸಭೆಯಲ್ಲಿ ಶಾಸಕರು ಹಾಗೂ ಎಂಎಲ್​ಸಿಗಳು ಭಾಗಿಯಾಗಲಿದ್ದಾರೆ. ಬೆಳೆಹಾನಿ ಬಗ್ಗೆ ಶೀಘ್ರ ವರದಿ ಪಡೆದು ಸರಕಾರದ ಗಮನಕ್ಕೆ ತರಲಾಗುವುದು ಎಂದರು. ಇನ್ನು ಇದೇ ವೇಳೆ ಸಾಲಮನ್ನಾ ವಿಚಾರವಾಗಿ ಮಾತನಾಡಿದ ಅವರು, ಆ ಕುರಿತು ಈಗಾಗಲೇ ಸಿಎಂ ಸ್ಪಷ್ಟನೆ ನೀಡಿದ್ದಾರೆ ಎಂದರು.

ನಿಮ್ಮ ಸಲಹೆ,ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv