14 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಒಬ್ಬನೇ ಅಭ್ಯರ್ಥಿ ಪರ ಬದ್ಧವೈರಿಗಳ ಪ್ರಚಾರ

ಮೈಸೂರು: 14 ವರ್ಷಗಳ ಬಳಿಕ ರಾಜಕೀಯ ಬದ್ಧ ವೈರಿಗಳಾದ  ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಿಟಿ ದೇವೇಗೌಡ ಕೈ ಕೈ ಕುಲುಕಿ ಒಂದಾಗಿದ್ದಾರೆ.   ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್ ವಿಜಯ್ ಶಂಕರ್ ಗೆಲುವಿಗೆ ಸಿದ್ದರಾಮಯ್ಯ  ಜಿ.ಟಿ ದೇವೇಗೌಡ  ರಣತಂತ್ರ ರೂಪಿಸುತ್ತಿದ್ದು, ಒಂದೇ ವೇದಿಕೆ, ಒಂದೇ ಕ್ಷೇತ್ರ, ಒಬ್ಬನೇ ಅಭ್ಯರ್ಥಿಯ ಪರ ಮತ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಜಿಲ್ಲೆಯ ಕಡಕೊಳ ಗ್ರಾಮದಲ್ಲಿ ಇಂದು ಕಾಂಗ್ರೆಸ್-ಜೆಡಿಎಸ್ ಜಂಟಿ ಸಭೆ ನಡೆಯುತ್ತಿದ್ದು, ಸನ್ಮಾನ ಸ್ವೀಕರಿಸಿ ಪರಸ್ಪರ ಕೈ ಕುಲುಕಿ ಮುಗುಳು​ ನಕ್ಕಿದ್ದಾರೆ.

ಇನ್ನು ಸಭೆಯಲ್ಲಿ  ಮಾತನಾಡಿದ ಸಚಿವ ಜಿಟಿ ದೇವೇಗೌಡ, ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಒಂದು ಆತಂಕ ಇತ್ತು. 1983ರಿಂದ ನಾನು ಸಿದ್ದರಾಮಯ್ಯ ಒಂದಾಗಿದ್ವಿ. ಬಳಿಕ 2014 ನಂತರ ನಾವಿಬ್ಬರು ಬೇರೆ ಬೇರೆ ಪಕ್ಷದಲ್ಲಿ ತದ್ವಿರುದ್ಧವಾಗಿ ಇದ್ವಿ. ಇವರಿಬ್ಬರು ಒಂದೇ ವೇದಿಕೆಯಲ್ಲಿ ಇರೋಲ್ಲ ಅನ್ನೋ ಆತಂಕ  ಎಲ್ಲಾರಿಗೂ ಇತ್ತು. ಈ  ಹಿಂದೆ ನಾನು ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಒಂದುವರೆ ಗಂಟೆ ಮಾತಾಡಿದ್ವಿ. ಕೆಲ ಲೋಪದೋಷಗಳಾಗಿತ್ತು ನಮ್ಮ‌ ಕಾಂಗ್ರೆಸ್ ಕಾರ್ಯಕರ್ತರು ಫೋಟೋ ಹಾಕಿಸುವ ವಿಚಾರದಲ್ಲಿ ವ್ಯತ್ಯಾಸ ಆಗಿತ್ತು.

ನಾವಿಬ್ಬರು ಇದ್ರ ಬಗ್ಗೆ ಚರ್ಚೆ ಮಾಡಿ ಕ್ಷೇತ್ರ ಪ್ರವಾಸಕ್ಕೆ ನಿರ್ಧಾರ ಮಾಡಿದ್ವಿ. 1983ನೇ ಇಸವಿಯಿಂದ ಇಬ್ಬರು ಕಡಕೊಳದಲ್ಲಿ ಅನೇಕ ಚುನಾವಣೆಗಳು ಮಾಡಿದ್ದೇವೆ.  ಇದೀಗ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಬಗ್ಗೆ ಎಲ್ಲಾ ವರಿಷ್ಠರು ತೀರ್ಮಾನ ಮಾಡಿದ್ದಾರೆ.  ಮೈತ್ರಿ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಸಿದ್ದರಾಮಯ್ಯ ಮೇಲಿದೆ. ಸಿದ್ದರಾಮಯ್ಯ ಅವರ ಯೋಜನೆಗಳನ್ನ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ಮುಂದುವರಿಸಿದ್ದಾರೆ.  ಇಂತಹ ಸಂಧರ್ಭದಲ್ಲಿ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ನಾವು ಶ್ರಮಿಸಬೇಕು ಎಂದು ಅವರು ಹೇಳಿದ್ರು.


firstNewsKannada  Instagram: firstnews.tv  Facebook: firstnews.tv  Twitter: firstnews.tv