‘ಡಿಕೆಎಸ್​​ ಸತ್ಯವನ್ನೇ ಹೇಳಿದ್ದಾರೆ, ಇನ್ಮುಂದೆಯಾದ್ರೂ ಒಗ್ಗಟ್ಟಾಗಿ ಹೋಗಲಿ’

ದಾವಣಗೆರೆ: ಇಂದು ಗದಗಿನಲ್ಲಿ ಮಾತನಾಡುತ್ತಿದ್ದ ಸಚಿವ ಡಿ.ಕೆ. ಶಿವಕುಮಾರ್​​​, ಪ್ರತ್ಯೇಕ ಲಿಂಗಾಯತ ಧರ್ಮ ರಚನೆಗೆ ಮುಂದಾಗಿದ್ದು ತಪ್ಪು. ಆದ್ದರಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ಹಿನ್ನೆಡೆಗೆ ಕಾರಣವಾಯ್ತು ಎಂದು ಬೆನ್ನಲ್ಲೇ ಪಕ್ಷದ ನಾಯಕರಲ್ಲಿ ಭಿನ್ನಮತ ಶುರುವಾಗಿದೆ. ಸಚಿವ ಡಿ.ಕೆ. ಶಿವಕುಮಾರ್​​ ಹೇಳಿಕೆಗೆ ಕಾಂಗ್ರೆಸ್​​ ಹಿರಿಯ ಮುಖಂಡ ಹಾಗೂ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಶಿವಕುಮಾರ್​​ ಸತ್ಯವನ್ನೇ ಹೇಳಿದ್ದಾರೆ. ಇನ್ಮುಂದೆ ಆದ್ರೂ ಎಲ್ಲರೂ ಒಗ್ಗಟ್ಟಾಗಿ ಹೋಗಲಿ ಎಂದು ಡಿಕೆಶಿ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.

ಡಿ.ಕೆ. ಶಿವಕುಮಾರ್​​ ಹೇಳಿಕೆಗೆ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ ಪ್ರತ್ಯೇಕ ಲಿಂಗಾಯತ ಧರ್ಮ ರಚನೆಗೆ ಮುಂದಾಗಿತ್ತು. ಲಿಂಗಾಯತ ಮತ್ತು ವೀರಶೈವ ಸಮುದಾಯಗಳ ಧರ್ಮ ಒಡೆಯುವ ಕೆಲಸದಿಂದ ಚುನಾವಣೆಯಲ್ಲಿ ಕಾಂಗ್ರೆಸ್​ಗೆ​​ ಹಿನ್ನೆಡೆಯಾಗಿತ್ತು. ಪ್ರತ್ಯೇಕ ಲಿಂಗಾಯತ ಧರ್ಮ ರಚನೆಗೆ ಮುಂದಾಗಿದ್ದಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಹಿನ್ನೆಡೆಯಾಯಿತು. ಹಳೆಯದೆಲ್ಲಾ ಮುಗಿದ ಅಧ್ಯಾಯ. ನಡೆದು ಹೋಗಿರುವ ಸಂಗತಿಗಳ ಬಗ್ಗೆ ಈಗ ಚರ್ಚಿಸೋದು ಬೇಡ. ಇನ್ನು, ಮುಂದಾದರೂ ಎಲ್ಲರೂ ಒಗ್ಗಟ್ಟಾಗಿ ಹೋಗಲಿ ಎಂದು ಶಿವಶಂಕರಪ್ಪ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv