ಧಾರವಾಡ ಕಟ್ಟಡ ದುರಂತ ಸರ್ಕಾರಕ್ಕೆ ಬಹುದೊಡ್ಡ ಪಾಠ: ಡಿ.ಕೆ ಶಿವಕುಮಾರ್

ಧಾರವಾಡ: ಧಾರವಾಡದ ಕಟ್ಟಡ ದುರಂತ ಸರ್ಕಾರಕ್ಕೆ ಬಹುದೊಡ್ಡ ಪಾಠ. ಇದರ ಬಗ್ಗೆ ಅಧಿಕಾರಿಗಳು, ಶಾಸಕರು, ಸ್ಥಳೀಯ ಪ್ರತಿನಿಧಿಗಳೆಲ್ಲ ಜತೆಗೆ ಒಂದು ಚರ್ಚೆ ಮಾಡಬೇಕಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದ ಕುಮಾರೇಶ್ವರ ನಗರದಲ್ಲಿ ಕಟ್ಟಡ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಡಿಕೆ. ಶಿವಕುಮಾರ್, ರಾಜ್ಯದಲ್ಲಿ ವಾಸಕ್ಕೆ ಯೋಗ್ಯವಲ್ಲದ ಕಟ್ಟಡಗಳು ಎಷ್ಟು ಅನ್ನೋದರ ಬಗ್ಗೆ ಪರಿಶೀಲನೆಯಾಗಬೇಕಿದೆ. ನಮ್ಮ ರಾಜ್ಯ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಎಲ್ಲ ಕಟ್ಟಡಗಳನ್ನು ಪರಿಶೀಲಿಸಿ ಫಿಟ್ನೆಸ್‌ ಸರ್ಟಿಫಿಕೆಟ್ ಕೊಡುವ ಕಾರ್ಯ ಆಗಬೇಕಿದೆ. ಈ ಸಂಬಂಧ ಹೊಸ ಕಾನೂನು ಮಾಡಲೇಬೇಕಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ರು.

ಈ ಒಂದೆ ಬಿಲ್ಡಿಂಗ್ ಅಲ್ಲ ರಾಜ್ಯದಲ್ಲಿ ಇಂತಹ ಅನೇಕ ಕಟ್ಟಡಗಳಿವೆ. ಪ್ರತಿ ಕಟ್ಟಡವನ್ನೂ ಪರಿಶೀಲಿಸಿ ದೃಢಿಕರಿಸುವ ಕಾರ್ಯ ಆಗಬೇಕಿದೆ. ನಗರಾಡಳಿತ ಮತ್ತು ಗ್ರಾಮೀಣಾಭಿವೃದ್ಧಿ ಆಡಳಿತದಿಂದಲೂ ಇದನ್ನು ಮಾಡಬೇಕಿದೆ. ಸದ್ಯ ಆಗಿರುವ ಘಟನೆ ಸಂಬಂಧ ಕಾನೂನು ಕ್ರಮ ಆಗುತ್ತೆ. ಯಾರೋ ಮಾಡಿದ ಸಣ್ಣ ತಪ್ಪಿಗೆ ಸಾಮಾನ್ಯ ಜನ ನೋವು ಅನುಭವಿಸಬೇಕಾಗಿದೆ. ಪ್ರತಿ ಹಳ್ಳಿ ನಗರದ ಎಲ್ಲ ಕಟ್ಟಡಗಳ ಕಾಮಗಾರಿ ಮೇಲೆ‌ ನಿಗಾ ಇಡುವುದು ಆಗಬೇಕು. ಸರಿಯಾದ ರೀತಿಯಲ್ಲಿ ದಾಖಲೀಕರಣ ಆಗಬೇಕಿದೆ. ಈ ಸಂಬಂಧ ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡ್ತೇವಿ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv