‘ಜನ ನಮ್ಮನ್ನ ನೋಡಿ ಕಳ್ಳ ಕಳ್ಳ’ ಎಂದು ಕರೆಯುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಜನರು ನಮ್ಮನ್ನ ಟಿವಿಯಲ್ಲಿ ನೋಡಿ ಕಳ್ಳ ಕಳ್ಳ ಎಂದು ಕರೆಯುತ್ತಿದ್ದಾರೆ. ಅಂತಹ ಪರಿಸ್ಥಿತಿ ಇಂದು ರಾಜಕೀಯದಲ್ಲಿ ನಿರ್ಮಾಣ ಆಗಿದೆ ಅಂತಾ ಸಚಿವ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, ಇಂದಿನ ರಾಜಕೀಯ ವ್ಯವಸ್ಥೆಗೆ ಬೇಸರ ವ್ಯಕ್ತಪಡಿಸಿದ್ರು. ಆಡಿಯೋ ವಿಚಾರವಾಗಿ ಮಾತನಾಡಿ, ನಾವು ನಿಮ್ಮನ್ನ ಚಿಕ್ಕ ವಯಸಿನಿಂದಲೂ ನೋಡಿದ್ದೇವೆ. ಆಡಿಯೋ ವಿಚಾರವಾಗಿ ನೀವು ಎಮೋಷನಲ್​​ ಆಗಬಾರದು. ಇಡೀ ದೇಶ ನಿಮ್ಮನ್ನ ಗಮನಿಸುತ್ತಿದೆ. ನೀವು ಎಮೋಷನ್​ ಆಗಿ ಆತುರದಲ್ಲಿ ಬೇರೇ ನಿರ್ಧಾರ ತೆಗೆದುಕೊಳ್ಳಬಾರದು. ಇದಕ್ಕೆ ಒಂದು ತಾರ್ಕಿಕ ಅಂತ್ಯ ನೀಡಿ, ಒಂದು ಇತಿಹಾಸ ನಿರ್ಮಿಸುವಂಥ ಅಂತ್ಯ ನೀಡಬೇಕೆಂದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv