ಹಾರಂಗಿ ಡ್ಯಾಂ ಸುಭದ್ರವಾಗಿದೆ, ಸುಳ್ಳು ವದಂತಿಗೆ ಕಿವಿ ಕೊಡಬೇಡಿ- ಡಿಕೆಶಿ

ಬೆಂಗಳೂರು: ಹಾರಂಗಿ ಡ್ಯಾಂ ಸುಭದ್ರವಾಗಿದೆ. ಜನತೆ ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆಯಿಲ್ಲ ಅಂತಾ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೆಲವು ಕಿಡಿಗೇಡಿಗಳು ಡ್ಯಾಂ ಡ್ಯಾಮೇಜ್ ಅಂತ ಸಳ್ಳು ಸುದ್ದಿ ಹಬ್ಬಿಸಿದ್ದಾರೆ. ಜನತೆ ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆಯಿಲ್ಲ. ಎಲ್ಲವೂ ಸುಭದ್ರವಾಗಿದೆ. ಈಗಾಗಲೇ ಸೇತುವೆ ಮೇಲೆ ಭಾರದ ವಾಹನ ಓಡಾಟಕ್ಕೆ ತಡೆ ಹಾಕಿದ್ದೇವೆ. ಕಿಡಿಗೇಡಿಗಳ ವಿರುದ್ಧ ನಮ್ಮ ಅಧಿಕಾರಿಗಳು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ ಅಂತಾ ಹೇಳಿದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಚಿವರು, ಈಗಾಗಲೇ ನಮ್ಮ ಇಲಾಖೆಯ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ. ಎಂಜಿನಿಯರ್​ಗಳು ಮೊಕ್ಕಾಂ ಹೂಡಿದ್ದಾರೆ. ನಾಳೆ ದೆಹಲಿಯಲ್ಲಿ ಕೇಂದ್ರ ಸಚಿವರು ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ನಂತರ ಕೊಡಗಿಗೆ ಹೋಗುತ್ತೇನೆ ಅಂತಾ ತಿಳಿಸಿದರು. ನೆರೆ ಪರಿಹಾರ ನಿಧಿಗೆ ನಮ್ಮ ಇಲಾಖೆಯಿಂದ ಒಂದು ದಿನದ ವೇತನ ನೀಡಲು ಸಿಬ್ಬಂದಿ ಒಪ್ಪಿದ್ದಾರೆ ಅಂತಾ ತಿಳಿಸಿದರು.