ಕೆಲ ಪಕ್ಷಗಳನ್ನೇ ಐಟಿ ಟಾರ್ಗೆಟ್ ಮಾಡ್ತಾ ಇದೆ: ಸಚಿವ ಕಾಶೆಂಪೂರ್​

ಶಿವಮೊಗ್ಗ: ಕೆಲ ಪಕ್ಷಗಳನ್ನು ಆದಾಯ ತೆರಿಗೆ ಇಲಾಖೆ ಟಾರ್ಗೆಟ್ ಮಾಡ್ತಾ ಇದೆ. ಎಲ್ಲಾ ಚುನಾವಣೆ ನೋಡಿದ್ದೇವೆ. ಯಾವಾಗಲೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೆಲ ಪಕ್ಷಗಳನ್ನು, ಬೆಂಬಲಿಗರನ್ನು ಟಾರ್ಗೆಟ್ ಮಾಡಿಲ್ಲ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್​ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳೋಕೆ ನಮ್ಮ ಅಭ್ಯಂತರ ಇಲ್ಲ. ಆದ್ರೆ, ಎಲ್ಲೋ ಒಂದು ಕಡೆ ವಾತಾವರಣದಲ್ಲಿ ಭಯ ಹುಟ್ಟಿಸುವ ಸಂಶಯ ಎಲ್ಲರಿಗೂ ಬರುತ್ತಿದೆ ಎಂದು ಬಂಡೆಪ್ಪ ಕಾಶೆಂಪೂರ್​ ಹೇಳಿದರು.

ಬಳಿಕ ಲಗಾನ್ ಕಲ್ಯಾಣ ಮಂದಿರದಲ್ಲಿ ನಡೆದ ಕುರುಬ ಸಮಾಜದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಬಂಡೆಪ್ಪ ಕಾಶೆಂಪೂರ್​ ಭಾಗಿಯಾದರು. ಈ ವೇಳೆ ಚುನಾವಣೆಯಲ್ಲಿ ಕುರುಬ ಜನಾಂಗದವರು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಸಮುದಾಯದ ಮುಖಂಡರು ಕರೆ ನೀಡಿದರು. ಇದೇ ವೇಳೆ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಕುರಿಮರಿಯನ್ನ ಉಡುಗೊರೆಯಾಗಿ ನೀಡುವ ಮೂಲಕ ಕುರುಬ ಸಮುದಾಯದ ಮುಖಂಡರು ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಎಂಎಲ್‌ಸಿ ಪ್ರಸನ್ನ ಕುಮಾರ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv