‘ಅನಂತಕುಮಾರ ಹೆಗಡೆ ನಾಲಾಯಕ್ ರಾಜಕಾರಣಿ’

ಕಾರವಾರ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಒಬ್ಬ ನಾಲಾಯಕ್ ರಾಜಕಾರಣಿ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಇಂದು ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾಭವನದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ರಾಜಕಿಯಕ್ಕೆ ಬಂದಿದ್ದು ಸಮಾಜ ಸೇವೆ ಮಾಡಲು ಅಲ್ಲ, ರಾಜಕೀಯ ಮಾಡಲು ಅಂತ ಅನಂತಕುಮಾರ ಹೆಗಡೆ ಅವರೇ ಹೇಳಿದ್ದಾರೆ. ರಾಜಕೀಯದ ಬುನಾದಿ ಸಮಾಜ ಸೇವೆ. ಆದರೆ, ಅವರಿಗೆ ಸಮಾಜ ಸೇವೆ ಬೇಕಾಗಿಲ್ಲ. ಅನಂತಕುಮಾರ ಹೆಗಡೆ ರಾಜಕಾರಣ ಪರೇಶ್ ಸಾವಿನ ಮೇಲೆ ನಡೆಯುತ್ತಿದೆ. ಇನ್ನೂ ಆ ಕೊಲೆಯ ತನಿಖೆ ಸಿಬಿಐನಿಂದ ಆಗಿಲ್ಲ. ಈಗ ಲೋಕಸಭಾ ಚುನಾವಣೆಗೂ ಇದನ್ನೇ ಬಳಸಿಕೊಳ್ಳುತ್ತಾರೆ. ಅವರಿಗೆ ತಾಕತ್ ಇದ್ರೆ ಐದು ತಿಂಗಳಲ್ಲಿ ಅಂಕೋಲಾದಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಲಿ ಎಂದು ಸವಾಲು ಹಾಕಿದರು. ಅವರಿಗೆ ಈ ಬಾರಿ ಅವಕಾಶ ಕೊಡಬಾರದು. ಈ ಬಾರಿಯಾದರೂ ಎಲ್ಲರೂ ಒಟ್ಟಾಗಿ ಅನಂತಕುಮಾರ ಹೆಗಡೆಗೆ ಬುದ್ಧಿ ಕಲಿಸಬೇಕು. ಸಮಾಜಸೇವೆ ಮಾಡುವ ವ್ಯಕ್ತಿ ನಮಗೆ ಬೇಕು ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv