ಬೇವಿನ ಮರದಲ್ಲಿ ನೊರೆ ಸಮೇತ ಹಾಲು- ಜನರಿಂದ ಪೂಜೆ

ಕೋಲಾರ: ತಾಲ್ಲೂಕಿನ ಯಲವಾರ ಗ್ರಾಮದ ಹೊರವಲಯದ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಬೇವಿನ ಮರದಲ್ಲಿ ಮೂರು ದಿನಗಳಿಂದ ನೊರೆ ಸಮೇತ ಹಾಲು ಜಿನುಗುತ್ತಿದೆ. ಇದರಿಂದ ಗ್ರಾಮಸ್ಥರು ಸೇರಿದಂತೆ ಸುತ್ತಾಮುತ್ತಲಿನ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದು, ಕೆಲವರು ಇದು ದೇವರ ವಿಸ್ಮಯವೆಂದು ಪೂಜೆ, ಪುನಸ್ಕಾರ ಮಾಡುತ್ತಿದ್ದಾರೆ.