ಮಹದಾಯಿ ವಿಚಾರ, ಮತ್ತೆ ಶಾಕ್ ಕೊಟ್ಟ ಗೋವಾ

ಪಣಜಿ: ಮಹದಾಯಿ ನ್ಯಾಯಾಧಿಕರಣ ಮಂಡಳಿ ಈಗಾಗಲೇ ಕಳಸಾ ಬಂಡೂರಿ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ರೂ ಕೂಡ ಗೋವಾ ಸರ್ಕಾರ ತನ್ನ ಕ್ಯಾತೆಯನ್ನ ಮಾತ್ರ ನಿಲ್ಲಿಸಿಲ್ಲ. ಇದೀಗ ಗೋವಾ ಸರ್ಕಾರ ಮತ್ತೆ ನ್ಯಾಯಮಂಡಳಿ ಮೊರೆ ಹೋಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪವನ್ನ ಹೊರಿಸಿರುವ ಗೋವಾ ಸರ್ಕಾರ 2014 ರಲ್ಲಿ ನ್ಯಾಯಮಂಡಳಿ ನೀಡಿದ್ದ ಆದೇಶವನ್ನ ಉಭಯ ರಾಜ್ಯದ ಸರ್ಕಾರಗಳು ಉಲ್ಲಂಘಿಸಿವೆ ಅಂತಾ ಆರೋಪಿಸಿದೆ.
ಇನ್ನು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಧಿಕರಣ ಆರು ತಿಂಗಳ ಒಳಗೆ ಉತ್ತರಿಸಬೇಕು ಅಂತಾ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಸೂಚಿಸಿದೆ. ಅಲ್ಲದೆ, ಇದಾದ ಬಳಿಕ ತಮ್ಮ ಪ್ರತಿಕ್ರಿಯೆ ನೀಡಲು ಗೋವಾ ಸರ್ಕಾರಕ್ಕೆ ನಾಲ್ಕುವಾರಗಳ ಕಾಲಾವಕಾಶವನ್ನು ನೀಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv