30 ವೇಶ್ಯೆಯರ ಜೊತೆ ಪಾರ್ಟಿ ಮಾಡಿದ 9 ಮೆಕ್ಸಿಕೋ ಫುಟ್‌ಬಾಲ್​ ಆಟಗಾರರು, ಮುಂದೆ ಆಗಿದ್ದೇನು?

ಮ್ಯಾಕ್ಸಿಕೋ: ಫಿಫಾ ವಿಶ್ವಕಪ್ ಫುಟ್ಬಾಲ್‌.. ಈ ಅಪೂರ್ವ, ಅದ್ಭುತ ಹಬ್ಬಕ್ಕೆ ದಿನಗಣನೆ ಸ್ಟಾರ್ಟ್​ ಆಗಿದೆ. ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಫಿಫಾ ಫುಟ್ಬಾಲ್ ಜ್ವರ ಆರಂಭಕ್ಕೂ ಮುನ್ನವೇ ಮೆಕ್ಸಿಕೋ ಟೀಂನ ಕೆಲವು ಆಟಗಾರರು ವಿವಾದವೊಂದನ್ನ ಮೈಮೇಲೆ ಎಳ್ಕೊಂಡಿದ್ದಾರೆ.

ಒಲಿಂಪಿಕ್ಸ್.. ಅಥ್ಲೆಟಿಕ್ಸ್​​ನಲ್ಲಿ ಆಗಾಗ ಸೆಕ್ಸ್ ​​ಸ್ಕ್ಯಾಂಡಲ್​​ಗಳು ನಡೀತಲೇ ಇರ್ತವೆ. ಇದೀಗ ಮೆಕ್ಸಿಕೋದ ಫುಟ್​ಬಾಲ್ ಆಟಗಾರರ ಮತ್ತೊಂದು ಸರದಿ. 9 ಮಂದಿ ಆಟಗಾರರು ಸುಮಾರು 30 ವೇಶ್ಯೆಯರ ಜೊತೆ ಫುಲ್​ ಪಾರ್ಟಿ ಮಾಡಿ ಇದೀಗ ದೊಡ್ಡ ಸುದ್ದಿಯಾಗಿದ್ದಾರೆ.

ಹೌದು, ಶನಿವಾರ ಸಂಜೆ ಮೆಕ್ಸಿಕೋ ಫುಟ್ಬಾಲ್ ಸಂಸ್ಥೆ ಫಿಫಾ ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡದ ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿತ್ತು. ಇದಾದ ಬಳಿಕ ಬಿಡುವಿನ ವೇಳೆಯಲ್ಲಿ ತಂಡದ 9 ಆಟಗಾರರು 30 ವೇಶ್ಯೆಯರ ಜೊತೆ ಪಾರ್ಟಿ ಮಾಡಿದ್ದಾರೆ. ರಾತ್ರಿಯೆಲ್ಲಾ ಮಜಾ ಮಾಡಿದ್ದಾರೆ ಎಂದು ಮೆಕ್ಸಿಕೋದ ಮ್ಯಾಗಜಿನ್ ಒಂದು ವರದಿ ಮಾಡಿದೆ.

ಶಿಕ್ಷೆ ವಿಧಿಸಲು ಆಗಲ್ಲ ಎಂದ ಅಧಿಕಾರಿಗಳು

ಇದು ದೊಡ್ಡ ವಿವಾದ ಆಗ್ತಿದ್ದಂತೆ ಪಾರ್ಟಿಯಲ್ಲಿ ಕಾಣಿಸಿಕೊಂಡ ಆಟಗಾರರಿಗೆ ಶಿಕ್ಷೆ ವಿಧಿಸುವ ಪ್ರಶ್ನೆ ಎದುರಾಗಿತ್ತು. ಆದ್ರೆ ಸದಸ್ಯರಿಗೆ ಶಿಕ್ಷೆ ವಿಧಿಸಲು ಆಗಲ್ಲ ಅಂತಾ ಮೆಕ್ಸಿಕನ್ ಅಧಿಕಾರಿಗಳು ತಿಳಿಸಿದ್ದಾರೆ. ಯಾಕಂದ್ರೆ ಅವರು ತಮ್ಮ ಬಿಡುವಿನ ವೇಳೆ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ನಾವು ಏನೂ ಮಾಡಲು ಬರಲ್ಲ ಅಂತಾ ಹೇಳಿದ್ದಾರೆ. ಇನ್ನು, ಮೆಕ್ಸಿಕನ್ ಫುಟ್ಬಾಲ್ ಫೆಡರೇಷನ್​​ನ ಮುಖ್ಯ ಕಾರ್ಯದರ್ಶಿ, ಗಿಲ್ಲೆರ್ಮೊ ಕ್ಯಾಂಟು, ಅವರಿಗೆ ಶಿಕ್ಷೆ ನೀಡಲು ಬರೋದೆ ಇಲ್ಲ. ಆಟಗಾರರು ಅಭ್ಯಾಸವನ್ನು ತೊರೆದ ಕಾರಣ ದಂಡ ವಿಧಿಸಲಾಗುವುದಿಲ್ಲ. ಅವರು ಉಚಿತ ಸಮಯದಲ್ಲಿ ಏನ್ಬೇಕಾದ್ರೂ ಮಾಡಲು ಸ್ವತಂತ್ರರಾಗಿರುತ್ತಾರೆ. ಅಲ್ಲದೇ, ಅವರು ಅದೇ ದಿನ ಹೊರಡಬೇಕಿದ್ದ ಟ್ರೈನ್ ಸಹ ಮಿಸ್​​ ಮಾಡಿಕೊಂಡಿಲ್ಲ ಅಂತಾ ತಿಳಿಸಿದ್ದಾರೆ.

ಹಾಗಂತ ಮೆಕ್ಸಿಕನ್ ಫುಟ್ಬಾಲ್ ಆಟಗಾರರು ಮಹಿಳೆಯ ಜೊತೆ ಮೋಜು-ಮಸ್ತಿನಲ್ಲಿ ಕಾಣಿಸಿಕೊಳ್ತಿರೋದು ಇದೇ ಮೊದಲಲ್ಲ. 2010ರಲ್ಲಿ ಮಾಂಟೆರಿಯಲ್ಲಿ ನಡೆದ ಪಂದ್ಯದ ವೇಳೆ ಕೆಲ ಆಟಗಾರರು ಮಹಿಳೆಯರ ಜೊತೆ ಕಾಣಿಸಿಕೊಂಡಿದ್ದರು. ಈ ವೇಳೆ ಎಲ್ಲಾ ಆಟಗಾರರಿಗೂ ದಂಡ ವಿಧಿಸಲಾಗಿತ್ತು. ಅಲ್ಲದೇ, 2011 ರಲ್ಲೂ ತಂಡದ ಆಟಗಾರರು ವೇಶ್ಯೆರ ಜೊತೆ ಹೋಟೆಲ್​​ನಲ್ಲಿ ಕಾಣಿಸಿಕೊಂಡಿದ್ದರು. ಆಗಲೂ ಅವರಿಗೆ ದಂಡದ ಜೊತೆಗೆ ಅರ್ಧ ವರ್ಷ ರಾಷ್ಟ್ರೀಯ ಫುಟ್ಬಾಲ್ ಆಡಲು ನಿಷೇಧ ಹೇರಲಾಗಿತ್ತು.

ಜೂನ್ 14 ರಿಂದ ಆರಂಭವಾಗಲಿರುವ ಫುಟ್ಬಾಲ್ ಕ್ರೀಡಾ ಹಬ್ಬ ಜುಲೈ 15ವರಗೆ ನಡಯಲಿದೆ. ಒಂದು ತಿಂಗಳುಗಳ ಕಾಲ ನಡೆಯಲಿರುವ ಮಹತ್ವದ ಫುಟ್ಬಾಲ್ ವಿಶ್ವಕಪ್ ಟೂರ್ನಿಗೆ ರಷ್ಯಾ ಆತಿಥ್ಯವಹಿಸಿದೆ. 64 ಪಂದ್ಯಗಳನ್ನೊಳಗೊಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ 32 ತಂಡಗಳು ಪಾಲ್ಗೊಳ್ಳುತ್ತಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv