ಕೇಂದ್ರ ಸಚಿವ ಎಂ.ಜೆ.ಅಕ್ಬರ್​ ಬಗ್ಗೆ ಸ್ಮೃತಿ ಇರಾನಿ ಹೇಳಿದ್ದೇನು?

ನವದೆಹಲಿ: ದೇಶವ್ಯಾಪ್ತಿ ಈಗ ಮೀಟೂ ಅಭಿಯಾನ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಮೀಟೂದಿಂದ ಹಲವರ ಮುಖವಾಡಗಳು ಕಳಚಿ ಬೀಳುತ್ತಿವೆ. ಇನ್ನು ಕೇಂದ್ರದ ಗೃಹಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್​ ಮೇಲೆ ಕೇಳಿ ಬಂದ ಹಲವು ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸ್ಮೃತಿ ಇರಾನಿ ಪ್ರತಿಕ್ರಿಯಿಸಿದ್ದಾರೆ. ಪತ್ರಕರ್ತೆಯೊಬ್ಬರು ಅಕ್ಬರ್​ ಬಗ್ಗೆ ಕೇಳಿದ ಪ್ರಶ್ನೆಗೆ, ಈ ವಿಷಯವು ತುಂಬಾ ಸೂಕ್ಷ್ಮವಾಗಿದೆ. ಆರೋಪಿ ಸ್ಥಾನದಲ್ಲಿರುವವರು ಉತ್ತಮ ಸ್ಥಾನದಲ್ಲಿರುವುದರಿಂದ ಇಂತಹ ಹೇಳಿಕೆ ಬಗ್ಗೆ ಉತ್ತರಿಸಲು ಆಗುವುದಿಲ್ಲ. ಆದರೂ ನಾನು ವೈಯಕ್ತಿಕವಾಗಿ ಏನನ್ನು ಹೇಳಲಾಗುವುದಿಲ್ಲ ಎಂದಿದ್ದಾರೆ.
ಪ್ರತಿಯೊಬ್ಬ ಮಹಿಳೆಯು ಇಂತಹ ವಿಷಯಗಳನ್ನ ಮಾತನಾಡುವಾಗ ಅಥವಾ ಭಾವನೆ ವ್ಯಕ್ತಪಡಿಸುವಾಗ ನಾಚಿಕೆಪಡಬಾರದು ಇದು ನನ್ನ ಅಪೇಕ್ಷೆ. ಮಾಧ್ಯಮಗಳು ಮಹಿಳೆಯರಿಗೆ ಉದ್ಯೋಗ ನೀಡುವುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. ಸಚಿವ ಎಂ.ಜೆ.ಅಕ್ಬರ್‌ ಬಗ್ಗೆ ಹಿರಿಯ ಪತ್ರಕರ್ತೆಯೊಬ್ಬರು ಗಂಭೀರ ಆರೋಪಗಳನ್ನ ಮಾಡಿದ್ದರು. ಎಂ.ಜೆ.ಅಕ್ಬರ್‌ ವರ್ತನೆಯನ್ನ ಖಂಡಿಸಿದ್ದರು. ಇದು ಈಗ ದೇಶಾದ್ಯಂತ ಸುದ್ದಿಯಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv