#MeToo ಅಭಿಯಾನದ ಬಗ್ಗೆ ಶೃತಿ ಹರಿಹರನ್ ಹೇಳಿದ್ದೇನು..?

ಹುಬ್ಬಳ್ಳಿ: #MeToo ಅಭಿಯಾನದಿಂದ ಆರೋಪಿತರ (ದೊಡ್ದವರ) ಹೆಸರುಗಳು ಬಹಿರಂಗೊಳುತ್ತಿವೆ. ಇದರಿಂದ ಖುಷಿಯಾಗುತ್ತಿದೆ. ಈ ಅಭಿಯಾನ ಒಂದು ಗೇಮ್ ಚೇಂಜರ್​​ ಎಂದು ನಟಿ ಶೃತಿ ಹರಿಹರನ್ ಅಭಿಪ್ರಾಯಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಶ್ರುತಿ ಹರಿಹರನ್

ನಗರದಲ್ಲಿ ಜುವೆಲರಿ ಶೋ ಉದ್ಘಾಟಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಶೃತಿ, ಈಗಲಾದ್ರು ಮಹಿಳೆಯರು ಧ್ವನಿ ಎತ್ತುತ್ತಿರುವದು ಸ್ವಾಗತಾರ್ಹ. ಒಬ್ಬ ಮಹಿಳೆಗೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯ ಸಹಿಸಿಕೊಳ್ಳುವದು‌ ಕಷ್ಟಕರ ಸಂಗತಿ. ಸತ್ಯ ಯಾವಾಗ ಹೇಳಿದರೂ ಅದು ಸತ್ಯವೇ ಆಗಿರುತ್ತದೆ. ಆರೋಪಿಗಳೆಲ್ಲರಿಗೂ ಶಿಕ್ಷೆ ಆಗದಿದ್ದರೂ, ಕೆಲವರಿಗಾದರೂ ಶಿಕ್ಷೆಯಾಗಲಿ ಅನ್ನೋದು ನಮ್ಮ ಆಶಯ. ಇದರಿಂದಾಗಿ ಮುಂದಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯ ಮಾಡುವವರು ವಿಚಾರ ಮಾಡುವಂತಾಗುತ್ತದೆ. ಇದೆಲ್ಲವೂ ಮೀಡಿಯಾಗಳಿಂದ ಸೆನ್ಸೇಷನಲ್ ಆಗುತ್ತಿವೆ ಎಂದು ನಟಿ ಶೃತಿ ಹರಿಹರನ್ ಹೇಳಿದರು.

ಲೈಂಗಿಕ ದೌರ್ಜನ್ಯದಲ್ಲಿ ಗಂಡು ಮತ್ತು ಹೆಣ್ಣಿನ ಪ್ರಶ್ನೆ ಬರಲ್ಲ. ಅಧಿಕಾರ ಬಲ ಹಾಗೂ ಹಣಬಲದಿಂದ ಇಂತ ಕೃತ್ಯ ನಡೆಯುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಚಲಚಿತ್ರ ವಾಣಿಜ್ಯ ಮಂಡಳಿಗಳೂ ಕೂಡಾ ಕಾಳಜಿವಹಿಸುತ್ತಿವೆ. #MeToo ಅಭಿಯಾನದಲ್ಲಿ ಕವಿತಾ ಲಂಕೇಶ್​ ಹಾಗೂ ನಾನು ಸೇರಿದಂತೆ ಹಲವರು ಭಾಗಿಯಾಗಿ ಧ್ವನಿ ಎತ್ತಲಿದ್ದೇವೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv