ಬಸ್ ತಡೆದ ಮಾನಸಿಕ ಅಸ್ವಸ್ಥೆ.! ಏನ್​ ಮಾಡಿದ್ಲು ಗೊತ್ತಾ..?

ನೆಲಮಂಗಲ: ಮಾನಸಿಕ ಅಸ್ವಸ್ಥೆಯೊಬ್ಬಳು ಸಂಚರಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸನ್ನು ತಡೆದು ಕಲ್ಲು ತೂರಿದ ಘಟನೆ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಮಾನಸಿಕ ಅಸ್ವಸ್ಥೆ ಬಸ್​ ಚಾಲಕ ವೆಂಕಟೇಶ್ನ‌ ಕೈ ಕೂಡ ಕಚ್ಚಿದ್ದಾಳೆ.
ಕುಣಿಗಲ್​ನ ಬೈಪಾಸ್​ ಬಳಿ ಘಟನೆ ನಡೆದಿದ್ದು, ಅಸ್ವಸ್ಥೆಯನ್ನು ಹಾಸನ ಜಿಲ್ಲೆ ಸಕಲೇಶಪುರ ಮೂಲದ ಪ್ರಮೀಳಾ ಎಂದು ಗುರುತಿಸಲಾಗಿದೆ. ಪ್ರಮೀಳಾ ತಡೆದ ಬಸ್ಸು, ತುಮಕೂರು ಡಿಪೋದಿಂದ ಬೆಂಗಳೂರಿಗೆ ತೆರಳುತಿತ್ತು. ಸದ್ಯ ಮಹಿಳೆಯನ್ನ ಚಿಕಿತ್ಸೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *