ಮಕ್ಕಳ ಕಳ್ಳ ಅಂತಾ ಮಾನಸಿಕ ಅಸ್ವಸ್ಥನನ್ನು ಥಳಿಸಿದ್ರು..

ದಾವಣಗೆರೆ: ಮಕ್ಕಳ ಕಳ್ಳರು ಎಂಬ ವದಂತಿ ಹಿನ್ನೆಲೆಯಲ್ಲಿ ಮಾನಸಿಕ ಅಸ್ವಸ್ಥನನ್ನು ಹಿಡಿದು ಥಳಿಸಿದ್ದ ಸಾರ್ವಜನಿಕರು, ನಿನ್ನೆ ರಾತ್ರಿ ಜಗಳೂರು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಇಂದು ಮಕ್ಕಳ ಕಳ್ಳ ಸಿಕ್ಕದ ಅಂದುಕೊಂಡು ವ್ಯಕ್ತಿಯನ್ನು ನೋಡಲು ಠಾಣೆಗೆ ನೂರಾರು ಜನರು ಬರುತ್ತಿದ್ದಾರೆ. ಪೊಲೀಸ್ ತನಿಖೆಯಲ್ಲಿ ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥ ಅಂತ ತಿಳಿದುಬಂದಿದೆ. ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಆತನಿಗೆ ಮಾತು ಬರುತ್ತಿರಲಿಲ್ಲ. ಇದನ್ನು ತಿಳಿದ ಪೊಲೀಸರು ವ್ಯಕ್ತಿಯನ್ನು ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯಲಿದ್ದಾರೆ.