ಬಸ್ತಿ ಕೆರೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನಿಗಾಗಿ ಮುಂದುವರಿದ ಶೋಧ

ಚಿಕ್ಕಮಗಳೂರು: ನಿನ್ನೆ ಕೊಪ್ಪ ತಾಲೂಕಿನ ಬಸ್ತಿ ಕೆರೆಯಲ್ಲಿ ಕೊಚ್ಚಿ ಹೋಗಿದ್ದ ಅಶೋಕ್ ಮೃತದೇಹಕ್ಕಾಗಿ, ಎನ್​ಡಿಆರ್​ಎಫ್ ತಂಡ, ಪೊಲೀಸರು, ಅಗ್ನಿಶಾಮಕದಳದವರಿಂದ ಶೋಧ ಕಾರ್ಯ ಮುಂದುವರಿದಿದೆ. ಶೋಧ ಕಾರ್ಯಕ್ಕೆ ಮಳೆ ಅಡ್ಡಿ ಎದುರಾಗಿದ್ದು, ಮಳೆಯ ನಡುವೆಯೂ ಶೋಧ ಕಾರ್ಯ ನಡೆಯುತ್ತಿದೆ.
ಶೃಂಗೇರಿ ತಾಲೂಕಿನ ಮೇಗೂರು ಗ್ರಾಮದ ಅಶೋಕ್ ಬೈಕ್ ಸಮೇತ ಕೊಚ್ಚಿ ಹೋಗಿದ್ದರು. ನಿನ್ನೆ ಕಾರ್ಯಾಚರಣೆ ನಡೆಸಿ, ಹಳ್ಳದಿಂದ ಬೈಕ್ ಮೇಲೆತ್ತಲಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv