ಮೋದಿಯನ್ನು ಬೆಂಬಲಿಸುವಂತೆ ಲಗ್ನಪತ್ರಿಕೆಯಲ್ಲಿ ಬಿಜೆಪಿ ಕಾರ್ಯಕರ್ತನ ಮನವಿ!

ಧಾರವಾಡ: ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಿರುವ ಜೋಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಎಂದು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣ ಮಾಡಿಸಿದ್ದಾರೆ. ಧಾರವಾಡದ ಕಲಘಟಗಿಯ ಭೋಗೆನಾಗರಕೊಪ್ಪದ ಬಿಜೆಪಿ ಕಾರ್ಯಕರ್ತರಾಗಿರುವ ಚೆನ್ನಬಸಪ್ಪ ಪುರದನ್ನವರ್ ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ‘ಮದುವೆ ಒಮ್ಮೆ ,ಮೋದಿಜೀ ಮತ್ತೊಮ್ಮೆ’ ಎಂದು ಮುದ್ರಿಸುವ ಮೂಲಕ ಮತ್ತೆ ಮೋದಿ ಪ್ರಧಾನಿಯಾಗಲು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಇದೇ ತಿಂಗಳು 22ರಂದು ಇವರ ಮದುವೆ ನಡೆಯಲಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv