ಪಾಕ್ ಪ್ರಧಾನಿಯನ್ನ ಹೊಗಳಿದ ಮೆಹಬೂಬಾ ಮುಫ್ತಿ..!

ಶ್ರೀನಗರ: ಭಾರತದಲ್ಲಿ ಅದರಲ್ಲೂ ಉತ್ತರಪ್ರದೇಶದಲ್ಲಿ ಹಲವು ನಗರಗಳ ಹೆಸರುಗಳ ಬದಲಾವಣೆ ಹಾಗೂ ರಾಮ ಮಂದಿರ ನಿರ್ಮಾಣ ಕುರಿತಂತೆ ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಈ ವಿಚಾರದಲ್ಲಿ ಪಾಕ್ ಪ್ರಧಾನಿಯನ್ನ ನೋಡಿ ನಮ್ಮ ಪಿಎಂ ಪಾಠ ಕಲೀಬೇಕು ಅಂತ ಹೇಳಿದ್ದಾರೆ.
ಇತ್ತೀಚಿಗೆ ಪಾಕಿಸ್ತಾನದ ಬಲೋಕಿ ಸಂರಕ್ಷಿತ ಅರಣ್ಯಕ್ಕೆ ಮೊದಲ ಸಿಖ್ ಗುರು ಗುರುನಾನಕ್ ದೇವ್​ರ ಹೆಸರನ್ನ ನಾಮಕರಣ ಮಾಡಲಾಗಿತ್ತು. ಇದನ್ನ ಅಭಿನಂದಿಸಿರುವ ಮೆಹಬೂಬಾ ಮುಫ್ತಿ, ಟ್ವೀಟ್ ಮಾಡಿದ್ದು, ಅದರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಸಮಯ ಹೇಗೆ ಬದಲಾಗುತ್ತೆ ನೋಡಿ. ಕೇಂದ್ರ ಐತಿಹಾಸಿಕ ನಗರಗಳ ಮರುನಾಮಕರಣ, ರಾಮ ಮಂದಿರಕ್ಕೆ ಹೆಚ್ಚು ಒತ್ತು ಕೊಡುತ್ತೆ. ಆದ್ರೆ, ಪಾಕ್ ಪ್ರಧಾನಿ ಬಲೋಕಿ ಅರಣ್ಯಕ್ಕೆ ಗುರುನಾನಕ್​ರ ಹೆಸರಿಟ್ಟಿದ್ದು ಅವರ ಹೆಸರಲ್ಲಿ ವಿಶ್ವವಿದ್ಯಾಲಯವನ್ನೂ ತೆರೆಯಲು ಮುಂದಾಗಿದ್ದಾರೆ ಅಂತ ಅಭಿನಂದನೆ ಸಲ್ಲಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv