ಸಮಸ್ಯೆಗಳ ಇತ್ಯರ್ಥಕ್ಕಾಗಿ ರೈತ ಹೋರಾಟಗಾರರ ಸಭೆ

ಧಾರವಾಡ: ಮಹದಾಯಿ ಯೋಜನೆ ಜಾರಿಗೊಳಿಸಬೇಕು. ‌ರೈತರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಬೇಕೆನ್ನುವ ನಿಟ್ಟಿನಲ್ಲಿ ಸರ್ಕಾರಗಳ ಗಮನಸೆಳೆಯುವ ನಿಟ್ಟಿನಲ್ಲಿ ಇಂದು ಹುಬ್ಬಳ್ಳಿಯಲ್ಲಿ ರೈತ ಮುಖಂಡರು ಹಾಗೂ ಕನ್ನಡ ಪರ ಸಂಘಟನೆಯ ಮೂಖಂಡರು ಸಭೆ ನಡೆಸಿದ್ದಾರೆ.
ರೈತ ಮುಖಂಡ ಕುಮಾರಸ್ವಾಮಿ ಹಿರೇಮಠ ಅಧ್ಯಕ್ಷತೆಯಲ್ಲಿ‌ ನಗರದ ಪ್ರವಾಸಿ ಮಂದಿರದಲ್ಲಿ ‌ ಕಳಸಾ-ಬಂಡೂರಿ ಪಕ್ಷಾತೀತ ರೈತ ಒಕ್ಕೂಟ ಸೇರಿದಂತೆ‌ 4 ಜಿಲ್ಲೆ 9 ತಾಲೂಕಿನ ರೈತರು ಸಭೆಯಲ್ಲಿ ಭಾಗಿಯಾಗಿ ಮುಂದಿನ ದಿನಗಳಲ್ಲಿ ರೈತರ ಸಮಸ್ಯೆ ಹಾಗು ಮಹದಾಯಿ ಹೋರಾಟದ ರೂಪರೇಷೆಗಳ ಕುರಿತು ಚರ್ಚೆ ನಡೆಸಿದರು.
ಸಭೆಯಲ್ಲಿ‌ ಇದೇ ಜೂನ್ ‌15 ರೊಳಗೆ ರೈತರ ನಿಯೋಗವೊಂದನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗತ್ತೇವೆ. ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಅವರ ಮೂಲಕ ಕೇಂದ್ರ ಸರ್ಕಾರದ ಮೇಲೆ ಮಹದಾಯಿ ವಿವಾದ ಬಗೆಹರಿಸುವಂತೆ ಒತ್ತಡ ಹೇರಲು ಮನವಿ ಮಾಡುವುದಾಗಿ ಹಿರೇಮಠ ತಿಳಿಸಿದ್ದಾರೆ. ಸಿಎಂ ಎಚ್‌ಡಿಕೆಯವರು ಗೋವಾ ಹಾಗೂ ಮಹಾರಾಷ್ಟ್ರ ಸಿಎಂಗಳನ್ನು ಭೇಟಿ ಮಾಡಿ‌ ಮಹದಾಯಿ ಯೋಜನೆ ಅನುಷ್ಠಾನ ಕುರಿತು ಚರ್ಚೆ ಮಾಡಬೇಕೆಂದು ಎಂದು ಒತ್ತಾಯಿಸಲು‌ ನಿರ್ಣಯಿಸಿದ್ದಾಗಿ ತಿಳಿಸಿದರು. ಅಲ್ಲದೇ ರೈತರ ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸುವುದು. ಮಹದಾಯಿ ಹೋರಾಟದಲ್ಲಿ ರೈತರು ಮೇಲೆ ಹಾಕಿರುವ 56 ಪ್ರಕರಣ ಸೇರಿದಂತೆ 200 ಅಧಿಕ ಸಾಮಾನ್ಯ, ದಲಿತರ ಮೇಲೆ ಹಾಕಿದ ಪ್ರಕರವನ್ನು ಕ್ಯಾಬಿನೇಟ್ ಸಭೆ ಕರೆದು ಇತ್ಯರ್ಥಗೊಳಿಸಬೇಕು, ಮಹದಾಯಿ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ರೈತರ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡುವಂತೆ ರಾಜ್ಯದ ಮುಖ್ಯಮಂತ್ರಿಯವರಿಗೆ ಒತ್ತಾಯಿಸಲು ಸಭೆಯಲ್ಲಿ ಒಪ್ಪಿಗೆ ತೀರ್ಮಾನಿಸಲಾಯಿತು ಎಂದು ರೈತ ಮುಖಂಡ ಕುಮಾರಸ್ವಾಮಿ ಹಿರೇಮಠ ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv