ಮಂಗನ ಕಾಯಿಲೆ ತಡೆಗೆ ಸಭೆ, 6 ಸಾವುಗಳ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು

ಉತ್ತರ ಕನ್ನಡ:  ಜಿಲ್ಲೆಯಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಮಂಗನ ಕಾಯಿಲೆ ಪೀಡಿತ ಸಿದ್ದಾಪುರದಲ್ಲಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಇಲಾಖಾ ಅಧಿಕಾರಿಗಳ ಸಭೆ ನಡೆಯಿತು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅಧಿಕಾರಿಗಳ ಸಭೆಗೂ ಮುನ್ನ ಸಾರ್ವಜನಿಕರ ಅಹವಾಲನ್ನು ಕೇಳಿದ ಸಿಇಒ, ಸಾರ್ವಜನಿಕರ ಪ್ರಶ್ನೆಗಳಿಗೆ ಅಧಿಕಾರಿಗಳ ಸಭೆಯಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಸಿದ್ದಾಪುರ ತಾಲೂಕಿನಲ್ಲಿ ಇದುವರೆಗೆ ಶಂಕಿತ ಮಂಗನಕಾಯಿಗೆ ಬಲಿಯಾದವರ ಸಂಖ್ಯೆ 6ನ್ನು ತಲುಪಿದ್ದು, ನಿನ್ನೆ ಬಾಳಗೋಡಿನ 60 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮಂಗನಕಾಯಿಲೆ ತಡೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಿದ ಅವರು ಯಾರಿಗಾದರೂ ಜ್ವರದ ಗುಣಲಕ್ಷಣಗಳು ಕಂಡುಬಂದು ತಾಲೂಕು ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಕೂಡಲೇ ಅವರಿಗೆ ಮೆಗ್ಗಾನ್ ಅಥವಾ ಮಣಿಪಾಲ್ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಿ, ಸಿಬ್ಬಂದಿಯ ಕೊರತೆ ಕುರಿತು ಹಲವಾರು ಕಂಪ್ಲೇಂಟ್​ಗಳಿದ್ದು, ಇನ್ನೊಂದು ವಾರದ ಒಳಗಾಗಿ ಅದನ್ನ ಪರಿಹರಿಸಲಾಗುವುದು ಅಂತಾ ತಾಲೂಕು ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು. ಮೃತಪಟ್ಟವರ ಕುಟುಂಬಗಳಿಗೆ ಪರಿಹಾರದ ಕುರಿತು ಡಿಸಿಯವರೊಡನೆ ಚರ್ಚಿಸಿ ಇದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಒಟ್ಟಿನಲ್ಲಿ ಬೆಂಕಿ ಬಿದ್ದ ಮೇಲೆ ಬಾವಿ ತೋಡಿದರು ಎಂಬಂತೆ 6 ಸಾವುಗಳಾದ ಮೇಲೆ  ಅಧಿಕಾರಿಗಳು ಎಚ್ಚೆತ್ತುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv