ಡಯಾಬಿಟಿಸ್​​ ರೋಗಿಗಳಿಗೆ ಸೂಪರ್​ ಫುಡ್​ ಈರುಳ್ಳಿ

ಬಹುಪಾಲು ಎಲ್ಲಾ ಮಸಾಲೆ ತಿನಿಸುಗಳಲ್ಲಿ ಈರುಳ್ಳಿಯ ಪಾತ್ರ ದೊಡ್ಡದ್ದು. ಈರುಳ್ಳಿಯಲ್ಲಿ ಸಲ್ಫರ್, ಫೈಬರ್, ಪೋಟ್ಯಾಶಿಯಂ, ಅಂಶಗಳು ಹೆಚ್ಚಾಗಿ ಇದ್ದು, ಯಾವುದೇ ಅಲರ್ಜಿ ಸಮಸ್ಯೆಯಿಂದ ದೂರವಿರಿಸುತ್ತದೆ. ಅಡುಗೆ ಮನೆಯಲ್ಲೇ ಸಿಗುವ ಈರುಳ್ಳಿ ಸಕ್ಕರೆ ಕಾಯಿಲೆಗೆ ಮದ್ದು. ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಹಣ್ಣುಗಳು ಹಾಗೂ ತರಕಾರಿಗಳು ಪ್ರಮುಖವಾಗಿ ಪರಿಣಾಮ ಬೀರುತ್ತವೆ. ಇವುಗಳಲ್ಲಿ ಈರುಳ್ಳಿ ಕೂಡಾ ಒಂದು. ಈರುಳ್ಳಿ ಸೇವನೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು ಎಂದು ಇತ್ತೀಚೆಗೆ ನಡೆಸಿದ ರಿಸರ್ಚ್ ತಿಳಿಸಿದೆ.

ಈರಳ್ಳಿ ತಿನ್ನುವುದರಿಂದ ಮಧುಮೇಹಿಗಳಿಗೆ ಸಾಕಷ್ಟು ಪ್ರಯೋಜನಗಳಿವೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಇದು ತಡೆಗಟ್ಟುತ್ತದೆ. ಬೇಸಿಗೆಯಲ್ಲಿ ಈರುಳ್ಳಿ ತಿನ್ನುವುದರಿಂದ ಅಥವಾ ರಸವನ್ನು ಸೇವಿಸುವುದರಿಂದ ದೇಹ ತಂಪಾಗಿ ಇರುತ್ತದೆ.

ಜರ್ನಲ್ ಫೈಟೋಫೋರ್ ಥೆರಪಿಯಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಅಂಶ ಹೆಚ್ಚಾಗಿದ್ದು, ಎಂಟು ವಾರಕ್ಕಿಂತ ಅಧಿಕ ಕ್ವೆರ್ಸೆಟಿನ್ ಡೋಸ್, ಟೈಪ್ 2 ಮಧುಮೇಹಿಗಳಿಗೆ ಬಹು ಉಪಯುಕ್ತ ಎನ್ನಲಾಗಿದೆ. ಎಂಟು ವಾರಗಳಲ್ಲಿ 500 ಮಿ.ಗ್ರಾಂ ಅಥವಾ ಅದಕ್ಕೂ ಹೆಚ್ಚು ಕ್ವೆರ್ಸೆಟಿನ್ ಡೋಸ್ ತೆಗೆದುಕೊಳ್ಳುವುದರಿಂದ ಮಧುಮೇಹ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಈರುಳ್ಳಿಯನ್ನು ಸರಿಯಾದ ಪ್ರಮಾಣದಲ್ಲಿ 28 ದಿನಗಳ ಕಾಲ ಸೇವಿಸಿದ್ರೆ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಇನ್ನು ಗರ್ಭಿಣಿಯರಿಗೆ ಅತ್ಯಧಿಕ ಪ್ರಮಾಣದಲ್ಲಿ ಈರುಳ್ಳಿ ಸೇವಿಸಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಈರುಳ್ಳಿ ಅಲರ್ಜಿ ಹಾಗೂ ಇತರ ಕಾಯಿಲೆಗಳಿಂದ ದೂರವಿರಿಸುತ್ತದೆ. ಅತ್ಯಧಿಕ ಪೋಷಕಾಂಶಗಳು ಈರುಳ್ಳಿಯಲ್ಲಿ ಇದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಪ್ರತಿನಿತ್ಯ ಈರುಳ್ಳಿ ಉಪಯೋಗಿಸಲು ಮರೆಯದಿರಿ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv