ಗಾಂಜಾ, ಮಾದಕ ದ್ರವ್ಯ ಮಾರಾಟ, ಮೆಡಿಕಲ್ ವಿದ್ಯಾರ್ಥಿ ಬಂಧನ

ದಾವಣಗೆರೆ: ಗಾಂಜಾ ಸೊಪ್ಪು ಹಾಗೂ ಇತರೆ ಮಾದಕ ದ್ರವ್ಯಗಳನ್ನ ಮಾರಾಟ ಮಾಡುತ್ತಿದ್ದ ಆರೋಪದಡಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಿಇಎನ್ ಅಪರಾಧ ಠಾಣೆಯ ಎಸ್ಐ ಟಿ.ವಿ ದೇವರಾಜ್ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ವಿದ್ಯಾರ್ಥಿ ಕೇರಳದ ತಿರುವಂತಪುರ ಜಿಲ್ಲೆಯ ನಿವಾಸಿ ಸಾಜನ್ ರಾಜ್ ಗೋಪಾಲ (28) ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಯಿಂದ ₹ 45,000 ಮೌಲ್ಯದ 1 ಕೆಜಿ 100 ಗ್ರಾಂ ಗಾಂಜಾ ಸೊಪ್ಪು, 0.10 ಗ್ರಾಂ ಎಲ್​​​​ಎಸ್​​​ಡಿ (LSD) ಮಾದಕ ದ್ರವ್ಯ, 1.79 ಗ್ರಾಂ ಎಂಡಿಎಂಎಂಎ (MDMA) ಟ್ರಾನ್ಸ್ಪರೆಂಟ್ ಖಾಲಿ 7 ಟ್ಯಾಬ್ಲೆಟ್ ಗುಳಿಗೆಗಳಿರುವ ಮಾದಕ ದ್ರವ್ಯ, 1.56 ಗ್ರಾ ಎಂಡಿಎಂಎ (MDMA) ಮಾದಕ ದ್ರವ್ಯದ ಪೌಡರ್ ಹಾಗೂ ಇತರೆ ಮಾದಕ ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ ನಗರದ ಸಿದ್ದವೀರಪ್ಪ ಬಡಾವಣೆಯ ಮನೆಯೊಂದರಲ್ಲಿ ಮಾದಕ ವಸ್ತುಗಳನ್ನು ದಾಸ್ತಾನು ಮಾಡಿದ್ದ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.