ಸಾಸನೂರ ಅಂತಿಮ ದರ್ಶನದ ಬಳಿಕ ಅತೃಪ್ತರ ಸಭೆಗೆ ಮರಳಲಿರುವ ಎಂ.ಬಿ.ಪಿ

ಬೆಂಗಳೂರು: ಮಾಜಿ ಸಚಿವ ಬಿ.ಎಸ್.ಪಾಟೀಲ್ ಸಾಸನೂರ ನಿಧನದ ಹಿನ್ನೆಲೆಯಲ್ಲಿ ಶಾಸಕ ಎಂ.ಬಿ.ಪಾಟೀಲ್ ನಿನ್ನೆ ರಾತ್ರಿಯೇ ವಿಜಯಪುರಕ್ಕೆ ತೆರಳಿದ್ದು, ಇಂದು ಸಾಸನೂರ ಅಂತಿಮ ದರ್ಶನ ಪಡೆಯಲಿದ್ದಾರೆ. ಬಳಿಕ ಅವರು ಬೆಂಗಳೂರಿಗೆ ಮರಳಲಿದ್ದು, ಮಧ್ಯಾಹ್ನ ತಮ್ಮ ನಿವಾಸದಲ್ಲಿ ನಡೆಯುವ ಅತೃಪ್ತರ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ರಾಹುಲ್ ಗಾಂಧಿ ಜೊತೆ ನಡೆಸಿದ ಮಾತುಕತೆ ಕುರಿತು ಅತೃಪ್ತ ಶಾಸಕರೊಂದಿಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಇಂದು ನಡೆಯುವ ಸಭೆಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ಎಂ.ಟಿ.ಬಿ.ನಾಗರಾಜ್​​​ ಮತ್ತು ಡಾ.ಸುಧಾಕರ್ ಸೇರಿ ಹಲವರು ಭಾಗವಹಿಸುವ ಸಾಧ್ಯತೆ ಇದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv