ನಾಳೆ ತೆರೆ ಕಾಣಬೇಕಿದ್ದ ಮಟಾಶ್ ಚಿತ್ರದ ರಿಲೀಸ್ ಮುಂದಕ್ಕೆ!

ಹೊಸ ಸೆನ್ಸೇಷನ್ ಹುಟ್ಟುಹಾಕುವುದಕ್ಕೆ ರೆಡಿಯಾಗಿದ್ದ ಮ್ಯೂಸಿಕಲ್‌, ಕಾಮಿಕಲ್‌ ಥ್ರಿಲ್ಲರ್‌ ಸಿನಿಮಾ ಮಟಾಶ್‌ ಚಿತ್ರ ಎಲ್ಲಾ ಅಂದುಕೊಂಡಂತಾಗಿದ್ರೆ ನಾಳೆನೇ ರಾಜ್ಯದಾದ್ಯಂತ ರಿಲೀಸ್ ಆಗಬೇಕಿತ್ತು. ಆದ್ರೆ ತಾಂತ್ರಿಕ ತೊಂದರೆಗಳಿಂದಾಗಿ ನಾಳೆ ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

ಚಿತ್ರಕ್ಕೆ ಒನ್ ಮ್ಯಾನ್ ಆರ್ಮಿ ಎಸ್.ಡಿ. ಅರವಿಂದ್
ಜುಗಾರಿ ಹಾಗೂ ಲಾಸ್ಟ್ ಬಸ್ ಚಿತ್ರಗಳಂತಹ ಸೆನ್ಸೇಷನಲ್ ಹಿಟ್ ನೀಡಿದ ನಿರ್ದೇಶಕ ಕೊಟ್ಟಿರುವ ನರಸಿಂಹರಾಜು ಅವರ ಮೊಮ್ಮಗ ಎಸ್‌.ಡಿ ಅರವಿಂದ್‌ ‘ಮಟಾಶ್​’ ಚಿತ್ರವನ್ನ ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಸಂಗೀತ ಮತ್ತು ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಇವರ ಸೋದರ ಅವಿನಾಶ್ ನರಸಿಂಹರಾಜು ಕಲಾನಿರ್ದೇಶನ, ವಿನೋದ್ ಬಸವರಾಜು ಸಂಕಲನ, ರೋನಿಚೆರಿಯನ್ ಅಬ್ರಾಹಂ ಛಾಯಗ್ರಹಣವಿದೆ. ತಾರಗಣದಲ್ಲಿ ಸಮರ್ಥ್ ನರಸಿಂಹರಾಜು, ಐಶ್ವರ್ಯಶಿಂಡೋಗಿ, ರಜನಿ ಭಾರದ್ವಾಜ್, ರಾಘು ರಾಮನಕೊಪ್ಪ, ನಂದಗೋಪಾಲ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದಕಾಳಿ, ರವಿಕಿರಣ್‍ರಾಜೇಂದ್ರನ್, ಸಿದ್ದಾಂತ್‍ಸುಂದರ್, ರಂಗುಸ್ವಾಮಿ ಸೇರಿದಂತೆ ಹಲವರು ನಟಿಸಿದ್ದಾರೆ.

2016ರ ರಲ್ಲಿ ನಡೆದ ನೋಟು ಅಮಾನ್ಯೀಕರಣದ ನಂತರ ಜನ ಅನುಭವಿಸಿದ ಸಂಕಷ್ಟಗಳೇನು ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ. ಬೆಂಗಳೂರು, ಮೈಸೂರು, ಬೆಂಗಳೂರು, ಬಿಜಾಪುರಗಳಲ್ಲಿ ನಡೆಯುವ ಘಟನೆ ಕೊನೆಗೆ ಮಲೆನಾಡಿನ ಮೂಲೆಯಲ್ಲಿ ಬೆಟ್ಟ ಗುಡ್ಡಗಳ ನಡುವೆ ಅಂತ್ಯ ಕಾಣುತ್ತದೆ. ಚಿತ್ರದಲ್ಲಿ 7 ಹಾಡುಗಳಿವೆ. ‘ಹಾಡುಗಳ ರಂಜನೆ, 2 ಫೈಟ್‌, ಒಂದಷ್ಟು ರೊಮ್ಯಾಂಟಿಕ್‌ ದೃಶ್ಯಗಳು, ಕಾಮಿಡಿಗಳ ಸಂಗಮ ಈ ಚಿತ್ರ. ಈಗಾಗಲೇ ಈ ಚಿತ್ರದ ಆಡಿಯೋ ಸಾಂಗ್​ಗಳು ಸಖತ್​ ಹಿಟ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಚಿತ್ರ ರಿಲೀಸ್ ಆದ್ಮೇಲೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.