ಮಾಸ್ತಿಗುಡಿ ನಿರ್ಮಾಪಕನಿಗೆ ಜಾಮೀನು ಮಂಜೂರು

ರಾಮನಗರ: ದುನಿಯಾ ವಿಜಯ್​​ ನಟನೆಯ ಮಾಸ್ತಿಗುಡಿ, ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಮೃತಪಟ್ಟ ಇಬ್ಬರು ಉದಯೋನ್ಮುಖ ಖಳನಟರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿತ್ರದ ನಿರ್ಮಾಪಕ ಸುಂದರ್​ ಗೌಡಗೆ ಜಾಮೀನು ಮಂಜೂರಾಗಿದೆ. ರಾಮನಗರದ 3ನೇ ಹೆಚ್ಚುವರಿ ಸೇಷನ್ಸ್​ ಕೋರ್ಟ್​ಜಾಮೀನು ಮಂಜೂರು ಮಾಡಿದೆ. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನಿರ್ಮಾಪಕ ಸುಂದರ್​​ ಗೌಡ ವಿರುದ್ಧ ಮೇ30 ರಂದು ಕೋರ್ಟ್​ ಬಂಧನ ವಾರೆಂಟ್​ ಹೊರಡಿಸಿತ್ತು. ಪೊಲೀಸರು ವಾರೆಂಟ್​ನ್ನು ತೆಗೆದುಕೊಂಡು ನಿರ್ಮಾಪಕರನ್ನು ಬಂಧಿಸಲು ಹೋದಾಗ ಸುಂದರ್​​ ಗೌಡ ಎಸ್ಕೇಪ್​​ ಆಗಿದ್ದರು. ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಿ ಇಂದು ಕೋರ್ಟ್​ಗೆ ಹಾಜರಾಗಿದ್ದರು. ನ್ಯಾ ಗೋಪಾಲಕೃಷ್ಣ ರೈ ಜಾಮೀನು ಮಂಜೂರು ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv