ಈ ದೇಶದಲ್ಲಿ ಉಗ್ರ ಎಂಬ ಪದ ಇತಿಹಾಸ ಸೇರಬೇಕು-ಗುರು ಪತ್ನಿ ಕಲಾವತಿ

ಮಂಡ್ಯ: ಪುಲ್ವಾಮಾ ಪೈಶಾಚಿಕ ಕೃತ್ಯದ ಮಾಸ್ಟರ್​​ ಮೈಂಡ್​ ಉಗ್ರರನ್ನ ಹತ್ಯೆ ಮಾಡಿರುವುದು ಖುಷಿ ತಂದಿದೆ ಎಂದು ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಹೇಳಿದ್ದಾರೆ. ಮಂಡ್ಯದ ಗುಡಿಗೆರೆ ಕಾಲೋನಿಯಲ್ಲಿ ಈ ಕುರಿತು ಮಾತನಾಡಿದ ಕಲಾವತಿ, ನನ್ನ ಗಂಡನ ಸಾವಿಗೆ ಕಾರಣನಾದ ಮಾಸ್ಟರ್ ಮೈಂಡ್ ಉಗ್ರನ ಹತ್ಯೆ ಖುಷಿ ತಂದಿದೆ. ಅವರನ್ನ ಕೊಂದ ಸೇನೆಯ ಸೈನಿಕರಿಗೆ, ಸೇನೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ. ಈ ದೇಶದಲ್ಲಿ ಉಗ್ರ ಎಂಬ ಪದ ಇತಿಹಾಸ ಸೇರಬೇಕು. ಉಗ್ರರು ಇದ್ದರು ಎಂಬುದಷ್ಟೇ ಮಾತನಾಡಬೇಕು. ಉಗ್ರರು ಇನ್ನೂ ಇದ್ದಾರೆ ಎಂಬ ಪದ ಇರಬಾರದು. ದೇಶದ ಜನ ಕೇಳುತ್ತಿದ್ದಾರೆ ಎಂದು ಈಗಷ್ಟೇ ಉಗ್ರರ ವಿರುದ್ಧ ದಾಳಿ ಮಾಡಿ ಸುಮ್ಮನಾಗಬಾರದು. ಉಗ್ರರ ಮೇಲಿನ ದಾಳಿ ಅವರ ನಾಶವಾಗುವವರೆಗೂ ನಿರಂತರವಾಗಿರಬೇಕು. ಉಗ್ರರ ವಿರುದ್ಧ ಹೋರಾಡುತ್ತಿರುವ ಯೋಧರು ಸುರಕ್ಷಿತವಾಗಿರಲಿ. ನನ್ನ ಪರಿಸ್ಥಿತಿ ಅವರ ಮನೆಯವರಿಗೆ ಬಾರದಿರಲಿ. ಸರ್ಕಾರ ನಮ್ಮ‌ ಸೈನಿಕರಿಗೆ ಹೆಚ್ಚಿನ ರಕ್ಷಣೆ ನೀಡಲಿ ಎಂದು ಕಲಾವತಿ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv