ಸ್ಮಶಾನದಲ್ಲಿ ಮದುವೆ ಆದವರಿಗೆ ₹2 ಲಕ್ಷ ನೀಡಿ: ಸಿಎಂಗೆ ಜಾರಕಿಹೊಳಿ ಮನವಿ

ಬೆಳಗಾವಿ: ಸ್ಮಶಾನದಲ್ಲಿ ವಿವಾಹ ಮಾಡಿಕೊಂಡವರಿಗೆ ಸರ್ಕಾರದಿಂದ 2 ಲಕ್ಷ ಪೋತ್ಸಾಹ ಧನ ನೀಡುವಂತೆ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರಿಗೆ ಶಾಸಕ ಸತೀಶ್​ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ.

ವೈಯಕ್ತಿಕವಾಗಿ ₹50 ಸಾವಿರ ವಿತರಣೆ
ಬೆಳಗಾವಿಯಲ್ಲಿ ಸ್ಮಶಾನದಲ್ಲಿ ಮೌಢ್ಯ ವಿರೋಧಿ ಪರಿವರ್ತನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಮೌಢ್ಯದ ಭಯದಿಂದ ಮುಕ್ತವಾಗಬೇಕು. ಮೌಢ್ಯಮುಕ್ತ ಸಮಾಜ ನಿರ್ಮಾಣವಾಗಬೇಕು. ಇದರಿಂದಾಗಿ ಸ್ಮಶಾನದಲ್ಲಿ ಮದುವೆ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿನ ಮೌಢ್ಯದಿಂದ ಭಯ ಮುಕ್ತ ಮಾಡಬೇಕು. ಬೆಳಗಾವಿ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿ ಅವರು ಸ್ಮಶಾನದಲ್ಲಿ ವಿವಾಹ ಆದವರಿಗೆ 2 ಲಕ್ಷ ಪ್ರೋತ್ಸಾಹ ಧನ ಘೋಷಣೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಸತೀಶ್​ ಜಾರಕಿಹೊಳಿ, ಸ್ಮಶಾನದಲ್ಲಿ ಮದುವೆ ಮಾಡಿಕೊಂಡವರಿಗೆ ವೈಯಕ್ತಿಕವಾಗಿ ₹50 ಸಾವಿರ ವಿತರಣೆ ಮಾಡುವುದಾಗಿ ಹೇಳಿದ್ದಾರೆ.