ಮಂತ್ರಾಲಯದ ಸುಜಯೀಂದ್ರ ತೀರ್ಥರ ಜನ್ಮಾಷ್ಟೋತ್ತರ, ಶತಮಾನೋತ್ಸವ ಸಮಾರಂಭ

ರಾಯಚೂರು: ಗುರು ರಾಘವೇಂದ್ರ ಸ್ವಾಮಿ ಮಠದ ಪೂರ್ವ ಪೀಠಾಧಿಪತಿಗಳಾದ ಸುಜಯೀಂದ್ರ ತೀರ್ಥರ ಜನ್ಮಾಷ್ಟೋತ್ತರ, ಶತಮಾನೋತ್ಸವ, ರಜತ ಮಹೋತ್ಸವ ಹಾಗೂ ಆರಾಧನೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಗಳನ್ನ ಮೂರು ದಿನಗಳ ಕಾಲ ವೈಭವದಿಂದ ಮಂತ್ರಾಲಯ ಮಠದಲ್ಲಿ ಆಯೋಜನೆ ಮಾಡಲಾಗಿದೆ.

ಫೆಬ್ರವರಿ 8, 9 ಮತ್ತು 10 ಮೂರು ದಿನಗಳ ಕಾಲ ನಡೆಯುತ್ತಿರುವ ಉತ್ಸವತ್ರಯ ಸಮಾರಂಭ ಪ್ರಯುಕ್ತ ಶ್ರೀ ಮಠದಲ್ಲಿ ಪ್ರತಿ ದಿನ ವಿಶೇಷ ಪೂಜಾ ಕೈಂಕರ್ಯಗಳು, ದಾಸವಾಣಿ, ಭಜನೆ ಹಾಗೂ ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮಗಳು, ಮಠದ ಪಿಠಾಧಿಪತಿಗಳಾದ ಸುಭುಧೇಂದ್ರ ತೀರ್ಥರ ನೇತೃತ್ವದಲ್ಲಿ ಜರುಗುತ್ತಿವೆ.

ರಾಜಕೀಯದಲ್ಲಿ ಆಣೆ ಪ್ರಮಾಣ ವಿಚಾರಕ್ಕೆ ಸಂಬಂಧಟ್ಟಂತೆ ಪ್ರತಿಕ್ರಿಯಿಸಿದ ಸುಭುದೇಂದ್ರ ತೀರ್ಥರು, ನಾವು ರಾಜಕೀಯದಲ್ಲಿ ಮೌಲ್ಯ ಉಳಿಸಿಕೊಳ್ಳಬೇಕು. ಯಾವುದೇ ಒಳಸಂಚಿಗೆ ರಾಜ್ಯವನ್ನ ಸಂಕಷ್ಟಕ್ಕೆ ಒಳ ಪಡಿಸಬಾರದು. ಆಣೆ ಪ್ರಮಾಣಗಳನ್ನ ಮಾಡಿ ದೈವಿಕ ಶಕ್ತಿಯನ್ನ ಅಪಹಾಸ್ಯ ಮಾಡಿದಂತಾಗುತ್ತದೆ. ತಮ್ಮ ಲೌಖಿಕ ವಿಚಾರಗಳಿಗೆ ದೈವೀಕವಾದಂತಹ ಆಣೆ ಪ್ರಮಾಣಗಳನ್ನ ತರಬಾರದು. ಇವುಗಳನ್ನ ಕಾಪಾಡುವ ನಿಟ್ಟಿನಲ್ಲಿ ರಾಜಕೀಯ ನಾಯಕರು ಗಮನ ಹರಿಸಬೇಕು. ಹೀಗಾದಲ್ಲಿ ರಾಜ್ಯಕ್ಕೆ ಮತ್ತು ರಾಜಕೀಯಕ್ಕೆ ಒಳಿತು ಎಂದು ಪ್ರತಿಕ್ರಿಯಿಸಿದ್ದಾರೆ.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv