ಹಾನಗಲ್‌ನಲ್ಲಿ ಮನೋಹರ ತಹಶೀಲ್ದಾರ್ ಯೂಟರ್ನ್

ಹಾವೇರಿ: ಕಾಂಗ್ರೆಸ್​ ವಿರುದ್ಧ ಬಂಡಾಯದ ಕಹಳೆ ಊದಿದ್ದ ಮನೋಹರ ತಹಶೀಲ್ದಾರ್ ಯೂಟರ್ನ್​ ಹೊಡೆದಿದ್ದಾರೆ. ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್ ಬಂಡಾಯ ಕಹಳೆ ಊದಿದ್ದರು. ಹಾಲಿ ಶಾಸಕರಾಗಿದ್ದರೂ ನನ್ನನ್ನು ಕಡೆಗಣಿಸಿ ಶ್ರೀನಿವಾಸ್ ಮಾನೆಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ನನ್ನ ಮುಂದಿನ ನಡೆಯ ಕುರಿತು ಬೆಂಬಲಿಗರೊಂದಿಗೆ ಚರ್ಚಿಸುತ್ತೇನೆ. ಈಗಾಗಲೇ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಮನೋಹರ್ ತಹಶೀಲ್ದಾರ್ ತಿಳಿಸಿದ್ದರು. ಇದೀಗ ನಾಮಪತ್ರ ವಾಪಸ್ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಜೆಡಿಎಸ್ ಕದ ತಟ್ಟಿ ಬಂದಿರುವ ಮನೋಹರ್ ತಹಶೀಲ್ದಾರ್ ಅವರಿಗೆ ಜೆಡಿಎಸ್ ನಿಂದಲೂ ಸ್ಪರ್ಧಿಸಲು ಅವಕಾಶ ಸಿಕ್ಕಿಲ್ಲ.