ಹಾವೇರಿಯಲ್ಲಿ ‘ಕೈ’ ಬಂಡಾಯ: ಬಿಜೆಪಿ ಸೇರಿದ ತಂದೆ ಮಗ..

ಹಾವೇರಿ: ಶಿಗ್ಗಾವಿ ಕ್ಷೇತ್ರದ ಟಿಕೆಟ್ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮಾಜಿ ಸಂಸದ ಮಂಜುನಾಥ ಕುನ್ನೂರ ಪ್ರಬಲ​ ಆಕಾಂಕ್ಷಿ ಆಗಿದ್ದರು. ಕೊನೆ ಕ್ಷಣದಲ್ಲಿ ಅವರಿಗೆ ಟಿಕೆಟ್​ ಕೈ ತಪ್ಪಿದೆ. ಹೀಗಾಗಿ ಪುತ್ರ ರಾಜು ಕುನ್ನೂರನೊಂದಿಗೆ ಕಾಂಗ್ರೆಸ್​ಗೆ ಗುಡ್​ಬೈ ಹೇಳಿದ್ದಾರೆ. ಅಲ್ಲದೇ ಬಿಎಸ್​ವೈ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಸಂಬಂಧ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಟ್ವೀಟ್​ ಮಾಡಿದ್ದು, ಕಾಂಗ್ರೆಸ್ ಪಕ್ಷದ ಒಡೆದಾಳುವ ನೀತಿಯಿಂದ ಬೇಸತ್ತು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಮಾನ್ಯ ನಾಯಕತ್ವಕ್ಕೆ ಹಲವು ಉತ್ತಮ ನಾಯಕರು ಆಕರ್ಷಿತರಾಗುತ್ತಿರುವುದು ಬಿಜೆಪಿಯ ಬಲ ಹೆಚ್ಚಿಸಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *