ಶ್ರೀಲಂಕಾದಲ್ಲಿ ಬಾಂಬ್​ ದಾಳಿ, ಮಂಗಳೂರಿನ ಮಹಿಳೆ ಸಾವು

ಮಂಗಳೂರು: ಶ್ರೀಲಂಕಾದ ಕೊಲೊಂಬೋದಲ್ಲಿ ನಡೆದ ಬಾಂಬ್​ ದಾಳಿಯಲ್ಲಿ ದಕ್ಷಿಣ ಕನ್ನಡ ಮೂಲದ ಮಹಿಳೆ ಸಾವನ್ನಪ್ಪಿದ್ದಾರೆ. ಮಂಗಳೂರು ಹೊರವಲಯದ ಬೈಕಂಪಾಡಿ ಮೂಲದ ಕುಕ್ಕಾಡಿಯ ಅಬ್ದುಲ್ ಖಾದರ್ ಕುಕ್ಕಾಡಿ ಅವರ ಪತ್ನಿ ರಝೀನಾ ಖಾದರ್ (58) ಮೃತ ಮಹಿಳೆ. ಕೊಲೊಂಬೋದಲ್ಲಿ ಅವರ ಬಂಧುಗಳು ನೆಲೆಸಿದ್ದು, ಅವರನ್ನು ಭೇಟಿಯಾಗಲು ಕುಕ್ಕಾಡಿ ದಂಪತಿ ತೆರಳಿದ್ದರು. ಅಲ್ಲಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ರಝೀನಾ ಇದ್ದರೆ, ಅವರ ಪತಿ ದುಬೈಗೆಂದು ವಿಮಾನದಲ್ಲಿ ಹೊರಟಿದ್ದರು. ಈ ವೇಳೆ ಶಾಂಗ್ರಿಲಾ ಹೊಟೇಲ್‌ನಲ್ಲಿ ನಡೆದ ಬಾಂಬ್​ ಸ್ಫೋಟದಲ್ಲಿ ರಝೀನಾ ಸಾವನ್ನಪ್ಪಿದ್ದಾರೆ. ದಂಪತಿ ಹಲವು ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾರೆ. ಅವರಿಗೆ ಮಂಗಳೂರಿನ ಸುರತ್ಕಲ್‌ನಲ್ಲಿ ಮನೆ ಇದೆಯಾದರೂ ಅಲ್ಲಿ ಯಾರೂ ಇಲ್ಲ. ಆವಗಾವಾಗ ಬಂದು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv