ಮನೇಕಾ ಗಾಂಧಿಯ ಕ್ಯಾಟಗರಿ ಸಿಸ್ಟಮ್​ ಪಾಲಿಟಿಕ್ಸ್..!

ಉತ್ತರಪ್ರದೇಶ: ಮುಸ್ಲಿಂ ಸಮುದಾಯದ ವೋಟ್​ಗಳ ವಿಚಾರವಾಗಿ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಮನೇಕಾ ಗಾಂಧಿ, ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಸುಲ್ತಾನ್​ಪುರ ಕ್ಷೇತ್ರದ ಱಲಿಯಲ್ಲಿ ಮಾತನಾಡಿದ ಮನೇಕಾ ಗಾಂಧಿ ತಮ್ಮ ಎಬಿಸಿಡಿ ಕ್ಯಾಟಗರಿ ವ್ಯವಸ್ಥೆ ಕುರಿತು ಬಡಬಡಾಯಿಸಿದ್ದಾರೆ. ಮನೇಕಾರವರ ಈ ಕ್ಯಾಟಗರಿ ಸಿಸ್ಟಮ್​ನಲ್ಲಿ ಬಿಜೆಪಿಗೆ ಮತ ಹಾಕೋ ಶೇಕಡಾ 80ರಷ್ಟು ಎ ಕ್ಯಾಟಗರಿಯಲ್ಲಿ ಬರ್ತಾರಂತೆ. ಉಳಿದಂತೆ ಶೇಕಡಾ 60ರಷ್ಟು ಬಿಜೆಪಿಗೆ ವೋಟ್​ ಹಾಕೋರು ಬಿ ಕ್ಯಾಟಗರಿ ಸೇರ್ತಾರೆ. ಇನ್ನು ಶೇಕಡಾ 50 ಕ್ಕಿಂತ ಕಡಿಮೆ ಬಿಜೆಪಿಗೆ ಮತ ಚಲಾಯಿಸೋರು ಸಿ ಕ್ಯಾಟಗರಿಯವರಾದ್ರೆ,  ಶೇ. 30 ಕ್ಕಿಂತ ಕಡಿಮೆ ಮತ ಹಾಕೋ ಹಳ್ಳಿಗಳು ಡಿ ಕ್ಯಾಟಗರಿಗೆ ಸೇರುತ್ತವೆ ಅಂತಾ ಹೇಳಿದ್ದಾರೆ. ಅಲ್ಲದೇ, ಅಭಿವೃದ್ಧಿ ಮುಂದಿಟ್ಟುಕೊಂಡು ಈ ಕ್ಯಾಟಗರಿ ಸಿಸ್ಟಮ್​ ಮಾಡಿರುವ ಮನೇಕಾ ಯಾರು ನನಗೆ ವೋಟ್​ ಹಾಕ್ತೀರೋ ಅವರ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುವುದೆಂದು ಹೇಳಿದ್ದಾರೆ. ಕಳೆದ ವಾರವಷ್ಟೇ ಮುಸ್ಲಿಮರು ವೋಟು ಹಾಕದಿದ್ದರೆ ನಾನು ಅವರ ಮನವಿಗಳಿಗೆ ಸ್ಪಂದಿಸೋ ಒಲವು ತೋರದಿರಬಹುದು ಅಂತಾ ಮನೇಕಾ ಹೇಳಿದ್ದರು. ವೋಟು ಹಾಕದಿದ್ದರೆ, ಅವರ ಕೆಲಸಗಳನ್ನು ಮಾಡಿಕೊಡುವುದಿಲ್ಲ ಅಂತ ಹೇಳೋ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv