ಮುಸ್ಲಿಮರು ವೋಟ್​ ಮಾಡದಿದ್ರೆ ಮನವಿಗಳಿಗೆ ಸ್ಪಂದಿಸಲ್ಲ ಎಂದ ಮನೇಕಾ ಗಾಂಧಿಗೆ ನೋಟಿಸ್​

ಸುಲ್ತಾನ್​​​ಪುರ್​: ನನಗೆ ವೋಟ್​​ ಮಾಡಿ, ಇಲ್ಲವಾದ್ರೆ ನಿಮ್ಮ ಮನವಿಗಳಿಗೆ ಸ್ಪಂದಿಸುವುದಿಲ್ಲ ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ಮುಸ್ಲಿಂ ಮತದಾರರಿಗೆ ಹೇಳಿದ್ದು, ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ತಮ್ಮ ಕ್ಷೇತ್ರವಾದ ಉತ್ತರಪ್ರದೇಶದ ಸುಲ್ತಾನ್​​ಪುರ್​​ನಲ್ಲಿ ಮಾತನಾಡುತ್ತಿದ್ದ ವೇಳೆ ಮನೇಕಾ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆ ಸುಲ್ತಾನ್​​ಪುರ್​​ನ ಜಿಲ್ಲಾ ಮ್ಯಾಜಿಸ್ಟ್ರೇಟ್,​​ ಮನೇಕಾ ಗಾಂಧಿಗೆ ಶೋಕಾಸ್​​ ನೋಟಿಸ್​ ನೀಡಿದೆ. ಜೊತೆಗೆ ಈ ಬಗ್ಗೆ ಚುನಾವಣಾ ಆಯೋಗಕ್ಕೆ ವರದಿ ಕಳಿಸಲಾಗಿದೆ.

ಮೊನ್ನೆ ಪ್ರಚಾರದ ವೇಳೆ ಮಾತನಾಡಿದ ಮನೇಕಾ ಗಾಂಧಿ, ನನಗೆ ಬೆಂಬಲ ನೀಡದಿದ್ದರೆ ನಿಮ್ಮ ಮನವಿಗಳಿಗೆ ಸ್ಪಂದಿಸುವ ಬಗ್ಗೆ ನಾನು ಒಲವು ತೋರದಿರಬಹುದು. ನಾನು ಈಗಾಗಲೇ ಈ ಎಲೆಕ್ಷನ್​​ ಗೆದ್ದಿದ್ದೀನಿ. ಈಗ ನೀವು ನಿರ್ಧರಿಸೋ ಸಮಯ. ಮುಸ್ಲಿಮರ ಬೆಂಬಲ ಇಲ್ಲದೆ ನಾನು ಗೆದ್ದರೆ ಬೇಸರವಾಗುತ್ತದೆ. ಅವರು ಮುಂದೆ ಏನಾದ್ರೂ ಕೆಲಸ ಮಾಡಿಸಿಕೊಳ್ಳಲು ಬಂದಾಗ, ಅವರಿಗೆ ಸಹಾಯ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನನಗೆ ಅನ್ನಿಸುತ್ತದೆ. ಎಲೆಕ್ಷನ್​​ನಲ್ಲಿ ಗೆಲ್ಲದಿದ್ದರೂ ಅವರಿಗೆ ಸಹಾಯ ಮಾಡುತ್ತಾ ಹೋಗಲು ನಾವು ಮಹಾತ್ಮಾ ಗಾಂಧಿಯಲ್ಲ ಅಂತ ಹೇಳಿದ್ದಾರೆ ಎಂದು ವರದಿಯಾಗಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv