ಪ್ರಚಾರದ ವೇಳೆ ಸಿಎಂ ಬೆಂಗಾವಲು ವಾಹನದಲ್ಲಿ ರೌಡಿಶೀಟರ್, ಪೊಲೀಸರಿಂದ ರಾಜಮರ್ಯಾದೆ..!

ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಪುತ್ರ ನಿಖಿಲ್​ ಪರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ನಿನ್ನೆಯೂ ಜಿಲ್ಲೆಯಲ್ಲಿ ಅವರು ಸಾಕಷ್ಟು ರೋಡ್​ ಶೋಗಳನ್ನು ನಡೆಸಿದ್ದಾರೆ. ಈ ವೇಳೆ, ಸಿಎಂ ಬೆಂಗಾವಲು ಪಡೆಯ ಪೊಲೀಸ್​​ ಕಾರಿನಲ್ಲಿಯೇ ರೌಡಿಶೀಟರೊಬ್ಬ ರಾಜಾರೋಶವಾಗಿ ಕಾಣಿಸಿಕೊಂಡಿದ್ದಾನೆ. ಬೆಂಗಾವಲು ಪಡೆಯೆಂದ ಮೇಲೆ ಆತನಿಗೆ ಪೊಲೀಸರಿಂದಲೇ ರಾಜಾತಿಥ್ಯವೂ ದೊರೆತಿದೆ. ಪ್ರಚಾರದ ವೇಳೆ ಸಿಎಂ ಬೆಂಗಾವಲು ಪಡೆ ವಾಹನದಲ್ಲಿ ಕುಳಿತಿದ್ದ ಆ ರೌಡಿಶೀಟರ್ ಹೆಸರು ಪ್ರಕಾಶ್ ಅಂತಾ. ಸದರಿ ಪ್ರಕಾಶ್, ಕಿರುಗಾವಲು ಠಾಣೆಯ ರೌಡಿ ಶೀಟರ್. ಈತ, ಸಿಎಂ ಜೊತೆ ಪ್ರಚಾರಕ್ಕಾಗಮಿಸಿದ್ದ ಎಂದು ತಿಳಿದುಬಂದಿದೆ. ಇನ್ನು ಇತ್ತೀಚೆಗೆ ಮಂಡ್ಯದಲ್ಲಿ ಪ್ರಚಾರದ ವೇಳೆ, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಯಾದರೆ ಅದಕ್ಕೆ ನಾನು ಹೊಣೆಯಲ್ಲ ಎಂದು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv