ಪುಟ್ಟರಾಜು ಪರ ನಿಲ್ಲದ ತವರಿನ ಶಾಸಕರು: ಡಿ.ಸಿ.ತಮ್ಮಣ್ಣ ಪರ ಬ್ಯಾಟಿಂಗ್​

ಮಂಡ್ಯ: ಜಿಲ್ಲಾ ಉಸ್ತುವಾರಿಗಾಗಿ ಸಚಿವದ್ವಯರ ಲಾಬಿ ಹಿನ್ನೆಲೆ, ಜಿಲ್ಲೆಯ ಜೆಡಿಎಸ್ ಶಾಸಕರು ಡಿ.ಸಿ.ತಮ್ಮಣ್ಣ ಪರ ನಿಂತಿದ್ದಾರೆ. ಸಿ.ಎಸ್.ಪುಟ್ಟರಾಜು ಜಿಲ್ಲಾ ಉಸ್ತುವಾರಿ ಸಚಿವರಾದಲ್ಲಿ ತಮ್ಮ ಕ್ಷೇತ್ರಗಳ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವ ಭೀತಿಯಿದೆ. ಹೀಗಾಗಿ ಜೆಡಿಎಸ್ ಶಾಸಕರು ತಮ್ಮಣ್ಣ ಪರ ನಿಂತಿದ್ದಾರೆ ಎನ್ನಲಾಗಿದೆ.

​ಡಿ.ಸಿ. ತಮ್ಮಣ್ಣ ಅವರಿಗೆ ಜಿಲ್ಲಾ ಉಸ್ತುವಾರಿ ನೀಡಿದರೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಶಾಸಕರು ತಮ್ಮ ಅಭಿಪ್ರಾಯವನ್ನು   ಜೆಡಿಎಸ್ ವರಿಷ್ಠರ ಮುಂದೆ ವ್ಯಕ್ತಪಡಿಸಿದ್ದಾರೆ. ಶಾಸಕರಾದ ಡಾ.ಅನ್ನದಾನಿ, ಸುರೇಶ್‌ಗೌಡ, ನಾರಾಯಣಗೌಡ, ಎಂ.ಶ್ರೀನಿವಾಸ್ ಹಾಗೂ ರವೀಂದ್ರ ಶ್ರೀಕಂಠಯ್ಯ ತಮ್ಮಣ್ಣ ಪರ ಬ್ಯಾಟಿಂಗ್ ಮಾಡಿದ್ದಾರೆ. ನಿನ್ನೆಯಷ್ಟೇ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಪುಟ್ಟರಾಜುಗೆ ಟಾಂಗ್​​ ನೀಡಿ, ಜನರ ಸೇವೆ ಮಾಡಲು ಸಣ್ಣ ನೀರಾವರಿಗಿಂತ ದೊಡ್ಡ ಖಾತೆ ಬೇಕಾ? ಎಂದಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:cantact@firstnews.tv