ಫೇಸ್‌ಬುಕ್‌ನಲ್ಲಿ ಜೆಡಿಎಸ್ ಟಿಕೆಟ್‌ ಆಕಾಂಕ್ಷೀ ಬೆಂಬಲಿಗರ ಕೆಸರೆರೆಚಾಟ

ಮಂಡ್ಯ: ಮಂಡ್ಯ ಲೋಕಸಭಾ ಉಪ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಕಾಂಗ್ರೆಸ್​- ಜೆಡಿಎಸ್​ ನಾಯಕರ ವಾಕ್ಸಮರ ತಾರಕ್ಕೇರಿದೆ. ಇದೀಗ ಜೆಡಿಎಸ್ ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರು ಫೇಸ್‌ಬುಕ್‌ನಲ್ಲಿ ಕೆಸರೆರೆಚಾಟ ನಡೆಸಿಕೊಂಡಿದ್ದಾರೆ.
ಲಕ್ಷ್ಮೀ ಅಶ್ವಿನ್ ಗೌಡ , ಶಿವರಾಮೇಗೌಡ ಬೆಂಬಲಿಗರು ಫೇಸ್​ಬುಕ್​ನಲ್ಲಿ ಪರಸ್ಪರ ಕಾಲೆಳೆದುಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ಕೊಡಿಸಿದ್ದು, ಶಿವರಾಮೇಗೌಡ. ಅವರಿಗೆ ಟಿಕೆಟ್ ಕೊಡೋದು ಉತ್ತಮ‌ ಅಂತಾ ಶಿವರಾಮೇಗೌಡ ಬೆಂಬಲಿಗರು ಫೇಸ್‌ಬುಕ್​ನಲ್ಲಿ  ಪೋಸ್ಟ್ ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೆಲವರು ಶಿವರಾಮೇಗೌಡ, ಲಕ್ಷ್ಮಿ ಅಶ್ವಿನ್ ಗೌಡ ಇತ್ತೀಚೆಗೆ ಪಕ್ಷಕ್ಕೆ ಬಂದವರು. ಇಬ್ಬರನ್ನು ಬಿಟ್ಟು ಮೂಲ ಜೆಡಿಎಸ್ ಮುಖಂಡರಿಗೆ ಟಿಕೆಟ್ ನೀಡಿ ಎಂದು ಆಗ್ರಹಿಸಿದ್ದಾರೆ. ಇಬ್ಬರು ಬೆಂಬಲಿಗರ ಕೆಸರೆರೆಚಾಟಕ್ಕೆ ಮೂಲ ಜೆಡಿಎಸ್​ ಜಿಲ್ಲಾ ನಾಯಕರು ಹೈರಾಣಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv