Me Too ಎನ್ನಲಿಲ್ಲ ಸ್ಥಳದಲ್ಲೇ ಬ್ಯಾಂಕ್​ ಮ್ಯಾನೇಜರ್​ಗೆ ಮೆಟ್​​ ಮೆಟ್ಟಲ್ಲೇ ಹೊಡೆದಳು ಗಟ್ಟಿಗಿತ್ತಿ

ದಾವಣಗೆರೆ: ಸಾಲ ಕೊಡುತ್ತೇನೆಂದು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮ್ಯಾನೇಜರ್​​ಗೆ ಗೂಸ ಕೊಟ್ಟ ಘಟನೆ ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ನಡೆದಿದೆ. ಡಿ.ಎಚ್.ಎಫ್.ಎಲ್ ಮ್ಯಾನೇಜರ್ ದೇವಣ್ಣ, ಮಹಿಳೆಯೊಬ್ಬರು ಸಾಲ ಕೇಳಲು ಬ್ಯಾಂಕ್​ಗೆ ಬಂದಾಗ ಫೋನ್​ ನಂಬರ್​ ತೆಗೆದುಕೊಂಡು ನೀನು ನನ್ನೊಂದಿಗೆ ಸಹಕರಿಸಿದರೆ ಸಾಲ ನೀಡುವುದಾಗಿ ಹೇಳಿದ್ದಾನೆಂದು ಮಹಿಳೆ ಆರೋಪ ಮಾಡಿದ್ದಾರೆ. ಅಲ್ಲದೇ ಮ್ಯಾನೇಜರ್​ನನ್ನು ಹಿಡಿದು ದೊಣ್ಣೆಯಿಂದ ಗೂಸ ಕೊಟ್ಟಿದ್ದಾರೆ. ಮ್ಯಾನೇಜರ್​​ನ ಶರ್ಟ್​​​ ಹಿಡಿದು ಕಟ್ಟಿಗೆಯಿಂದ ಹೊಡೆದಿದ್ದಾಳೆ.ಅಲ್ಲದೇ ಆಕ್ರೋಶಗೊಂಡ ಮಹಿಳೆ, ತನ್ನ ಚಪ್ಪಲಿಯಿಂದ ಬಾರಿಸಿದ್ದಾಳೆ. ಬಳಿಕ ಮ್ಯಾನೇಜರ್ ದೇವಣ್ಣನನ್ನು ಸಾರ್ವಜನಿಕರು ಮಹಿಳಾ ಠಾಣೆಗೆ ಒಪ್ಪಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv