ದೇವರನ್ನೇ ಪರೀಕ್ಷೆ ಮಾಡಲು ಹೋದವನು ಏನಾದ ಗೊತ್ತಾ..?

ಉಡುಪಿ: ದೇವರು ಮನುಷ್ಯರನ್ನ ಪರೀಕ್ಷೆ ಮಾಡ್ತಾನೆ ಅನ್ನೋ ಮಾತನ್ನ ಹಿರಿಯರು ಹೇಳೋದನ್ನ ಕೇಳಿರ್ತೀವಿ. ಹಾಗಂತ ಮನುಷ್ಯನೇ ದೇವರನ್ನ ಪರೀಕ್ಷೆ ಮಾಡೋದಕ್ಕೆ ಹೋಗಬಾರದು ಅಂತಾನೂ ಬುದ್ಧಿಮಾತು ಹೇಳ್ತಿರ್ತಾರೆ. ಇಷ್ಟಾದ್ರೂ ಇಲ್ಲೊಂದು ಕಿಡಿಗೇಡಿ ಪಡೆ ದೇವರನ್ನೇ ಪರೀಕ್ಷೆ ಮಾಡಲು ಹೋಗಿ ವಿಚಿತ್ರ ಸಂಕಟಕ್ಕೆ ಸಿಲುಕಿಕೊಂಡ ಪ್ರಸಂಗವಿದು.
ಜಿಲ್ಲೆಯ ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಸನ್ನಿಧಾನದಲ್ಲಿ ಕೊರಗಜ್ಜನ ಆರಾಧನೆ ಹಿಂದಿನಿಂದಲೂ ನಡೆಯುತ್ತಿದೆ. ಈ ಕ್ಷೇತ್ರದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಿಡಿಗೇಡಿಗಳ ಗುಂಪೊಂದು ಕಳವು ಮಾಡಿಬಿಟ್ಟಿತ್ತು. ಬರೀ ಕಾಣಿಕೆ ಕದ್ದಿದ್ದಷ್ಟೇ ಅಲ್ಲದೆ, ಶಿವಲಿಂಗದ ಮಾದರಿಯಲ್ಲಿರುವ ಕಾಣಿಕೆ ಡಬ್ಬಿಗೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಕಾಂಡೋಮ್ ಪ್ಯಾಕೇಟುಗಳನ್ನು ಡಬ್ಬಿಗೆ ತುರುಕಿ ಹೋಗಿದ್ದಾರೆ.
ದೈವ ಏನು ಮಾಡುತ್ತೆ ಅಂತಾ ನೋಡೋಣ ಅನ್ನುತ್ತಲೆ ಯುವಕರ ತಂಡ ಹೀಗೆ ಮಾಡಿದೆ ಅನ್ನೋದು ಸ್ಥಳೀಯರ ವಾದ. ಆದರೆ ಕಾಕತಾಳಿಯವೋ, ಇಲ್ಲಾ ದೈವ ಲೀಲೆಯೋ… ಈ ಅನಾಗರಿಕ ವರ್ತನೆ ತೋರಿದ ಕೆಲವೇ ದಿನಗಳಲ್ಲಿ ತಂಡದಲ್ಲಿದ್ದ ಅಪ್ರಾಪ್ತ ಬಾಲಕನೊಬ್ಬ ಹಠಾತ್ ಅಸ್ವಸ್ಥಗೊಂಡಿದ್ದಾನೆಯ ಆತನ ಸೊಂಟದ ಕೆಳಗೆ ಅಂದರೆ ಕಾಲಿನ ಭಾಗ ಬಲ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾನೆ. ಈ ಬಗ್ಗೆ ವೈದ್ಯರಿಗೆ ತೋರಿಸಿದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಕಡೆಗೆ ಸಂತ್ರಸ್ತ ಕುಟುಂಬ ಜ್ಯೋತಿಷಿಯ ಮೊರೆ ಹೋಗಿದೆ. ಆಗ ಕೊರಗಜ್ಜನಿಗೆ ಮಾಡಿದ ಅಪಚಾರದ ಪ್ರಸ್ತಾಪವಾಗಿದೆ. ಅದರಂತೆ ಕೊರಗಜ್ಜನ ಸ್ಥಾನಕ್ಕೆ ಬಂದು ನೊಂದ ಕುಟುಂಬ ವಿಷಯ ತಿಳಿಸುತ್ತಾರೆ. ಈ ನಡುವೆ ಕಾಣಿಕೆ ಡಬ್ಬಿ ತೆರೆದು ನೋಡಿದ ಕ್ಷೇತ್ರದ ಆಡಳಿತ ಮಂಡಳಿಗೂ ಕಿಡಿಗೇಡಿಗಳ ಕೃತ್ಯ ಅರಿವಿಗೆ ಬಂದಿರುತ್ತೆ. ಕೊನೆಗೆ‌ ಕುಟುಂಬದ ಕೋರಿಕೆಯಂತೆ ಕೊರಗಜ್ಜ ದರ್ಶನ ಏರ್ಪಾಟು‌ ಮಾಡಿದ್ದಾರೆ. ಅಪಚಾರ ಮಾಡಿದ ಅಪ್ರಾಪ್ತ ಬಾಲಕ ದೈವದ ಕ್ಷಮೆ ಕೋರಿದ್ದಾನೆ. ಇಂತಹಾ ಕೃತ್ಯ ಮಾಡಕೂಡದು ಎಂದು ದೈವ ಎಚ್ಚರಿಸಿದೆ. ವಿಶೇಷ ಅಂದ್ರೆ ಹೀಗೆ ಪಾಡು ಪಟ್ಟಿರೋ ಬಾಲಕ ಅನ್ಯಕೋಮಿಗೆ ಸೇರಿದವನು. ಆದ್ರೂ ಕೊರಗಜ್ಜನ ಬಗ್ಗೆ ಆತನಿಗೆ ಈಗ ಅದೇನೋ ಭಯ ಮೂಡಿಕೊಂಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv