ಗಂಡನ ಕೊಲೆ ಮಾಡು ಎಂದು ಒತ್ತಡ ಹೇರಿದ್ದಕ್ಕೆ ಲವರ್​ಗೆ ಚಾಕು ಇರಿದ ಪ್ರೇಮಿ

ಬೆಂಗಳೂರು: ಇದೇ ತಿಂಗಳ 16ನೇ ತಾರೀಖು ಆರ್​​​. ಆರ್ ನಗರ ಹತ್ತಿರದ ಆರ್ಮುಗಮ್ಮ ದೇವಸ್ಥಾನದ ಬಳಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದು ಠಾಣೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಘವೇಂದ್ರ ಶಾಸ್ತ್ರಿ ಅಲಿಯಾಸ್​ ರಘು ಪೊಲೀಸರಿಗೆ ಶರಣಾದ ಆರೋಪಿ.

ಸಿರಿಶಾ ಚಾಕು ಇರಿತಕ್ಕೊಳಗಾದ ಮಹಿಳೆ. ಆರೋಪಿ ರಾಘವೇಂದ್ರ ಶಾಸ್ತ್ರಿ ಹೈದರಾಬಾದ್​​ನಲ್ಲಿ 5 ವರ್ಷದ ಹಿಂದೆ ಹೆಂಡತಿಯಿಂದ ದೂರವಾಗಿದ್ದ. ಇತ್ತೀಚೆಗೆ ಆರ್​​​​. ಆರ್ ನಗರದಲ್ಲಿ ಅಕ್ಕನ ಮನೆಯಲ್ಲಿ ವಾಸವಾಗಿದ್ದ ಈ ವೇಳೆ ಎದುರುಗಡೆ ಇದ್ದ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳಿಸಿಕೊಂಡಿದ್ದ ಎನ್ನಲಾಗಿದೆ. ವಿವಾಹಿತ ಪ್ರೇಯಸಿ ತನ್ನ ಗಂಡನನ್ನು ಕೊಲೆ ಮಾಡುವಂತೆ ಪೀಡಿಸುತ್ತಿದ್ದಳು. ಕೊಲೆ ಮಾಡಲು ಒಪ್ಪದ ಶಾಸ್ತ್ರಿಗೆ ಹಿಯಾಳಿಸ ತೊಡಗಿದ್ದಳು ಎನ್ನಲಾಗಿದೆ. ಇದರಿಂದ ಕಂಗೆಟ್ಟ ಶಾಸ್ತ್ರಿ ಈ ಮೊದಲೇ ಇಟ್ಟಮಡುವಿನಲ್ಲಿ ಚಾಕು ಖರೀದಿಸಿ ಕದಿರೇನಹಳ್ಳಿಯ ಕರ್ನಾಟಕ ಬಾರ್​​​​ನಲ್ಲಿ ಮದ್ಯ ಸೇವಿಸಿ ಆಕೆಯನ್ನು ಆರ್​​​. ಆರ್ ನಗರದ ಹತ್ತಿರ ಆರ್ಮುಗಮ್ಮ ದೇವಸ್ಥಾನ ಹತ್ತಿರ ಕರೆತಂದು 10ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ನಂತರ ಚಾಕುವನ್ನು ಅಲ್ಲಿಯೇ ಬಿಟ್ಟು ಪೊಲೀಸ್ ಠಾಣೆಗೆ ತೆರಳಿ ಸರಂಡರ್​ ಆಗಿದ್ದಾನೆ. ಸದ್ಯ ಗಾಯಾಳು ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ರಾಜರಾಜೇಶ್ವರಿ‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv