ಹೈಯೆಸ್ಟ್​​ ಸ್ಪೀಡ್​​ನಲ್ಲಿ ರಿಕ್ಷಾ ಓಡಿಸಿ ವಿಶ್ವ ದಾಖಲೆ..!

ವ್ಯಕ್ತಿಯೊಬ್ಬರು ಅತೀ ವೇಗವಾಗಿ ಟುಕ್​ ಟುಕ್​​ (ರಿಕ್ಷಾ) ಓಡಿಸೋ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್​​ನ ಎಸ್ಸೆಕ್ಸ್​ ನಿವಾಸಿಯಾದ 46 ವರ್ಷದ ಮ್ಯಾಟ್​ ಎಡ್ವರ್ಡ್​ ದಾಖಲೆ ಮಾಡಿದವರು. ಎಲ್ವಿಂಗ್​​ಟನ್​​ ಏರ್​​ಫೀಲ್ಡ್​​​ನಲ್ಲಿ ಎಡ್ವರ್ಡ್​​, ಗಂಟೆಗೆ 119.583 ಕಿ.ಮೀ ವೇಗದಲ್ಲಿ ರಿಕ್ಷಾ ಓಡಿಸಿದ್ದಾರೆ. ಈ ಮೂಲಕ ಅವರ ಹೆಸರು ಗಿನ್ನೀಸ್​ ವಿಶ್ವ ದಾಖಲೆಯ ಪುಟ ಸೇರಿದೆ.

ಟುಕ್ ಟುಕ್ ಹಾಗೂ ಆಟೋರಿಕ್ಷಾಗಳು ಭಾರತ ಹಾಗೂ ಥೈಲ್ಯಾಂಡ್​​ನಲ್ಲಿ ಕಾಮನ್​​​. ಆದ್ರೆ ಇಂಗ್ಲೆಂಡ್​​ನಲ್ಲಿ ಇದರ ಬಳಕೆ ಕಡಿಮೆ. ಎಡ್ವರ್ಡ್​ ಅವರು ಕುಡಿದ ಮತ್ತಿನಲ್ಲಿ ಒಮ್ಮೆ ಇ-ಬೇನಲ್ಲಿ ರಿಕ್ಷಾ ಖರೀದಿಸಿದ್ದರಂತೆ. 3000 ಪೌಂಡ್ಸ್​​( ಸುಮಾರು ₹2.7 ಲಕ್ಷ) ಹಣ ಕೊಟ್ಟು ರಿಕ್ಷಾ ಖರೀದಿಸಿ, ಅದರ 350 ಸಿಸಿ ಎಂಜಿನ್​​​​​​ ಜಾಗದಲ್ಲಿ 1300 ಸಿಸಿ  ದೈಹಾಟ್ಸು ಎಂಜಿನ್ ಹಾಕಿಸಿದ್ದರು. ಇದೇ ವಾಹನದಲ್ಲಿ ದಾಖಲೆ ನಿರ್ಮಿಸಲು ನಿರ್ಧರಿಸಿದ್ರು. ಇನ್ನು ತಾವು ವಾಹನ ಚಾಲನೆ ಮಾಡುವಾಗ ಹಿಂದಿನ ಸೀಟ್​​ನಲ್ಲಿ ಪ್ರಯಾಣಿಕರೊಬ್ಬರು ಬೇಕು ಎಂದಾಗ ಎಡ್ವರ್ಡ್​​ ಸಂಬಂಧಿ ಮುಂದೆ ಬಂದ್ರು. ಅಂದ್ಹಾಗೆ  ರಿಕ್ಷಾದಲ್ಲಿ ಸ್ಪೀಡಾಗಿ ಓಡಿಸಿ ಗಿನ್ನೀಸ್​​ ರೆಕಾರ್ಡ್​ ಮಾಡಿರೋದು ಇದೇ ಮೊದಲು ಎಂದು ವರದಿಯಾಗಿದೆ.

ತನ್ನ ಈ ರೆಕಾರ್ಡ್​ ಬಗ್ಗೆ ಮಾತನಾಡಿರೋ ಎಡ್ವರ್ಡ್​ ನನಗೆ ತುಂಬಾ ಖುಷಿಯಾಗ್ತಿದೆ. ಮೊದಲಿಗೆ ರಿಕ್ಷಾದ ಚಕ್ರ ಅತ್ತಿತ್ತ ಅಲುಗಾಡಿದಂತಾಯ್ತು. ನಂತರ ಎಲ್ಲಾ ಸರಿ ಹೋಯ್ತು. ನನಗೆ ಭಯವಾಗಲಿಲ್ಲ ಎಂದಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv